ಉಡುಪಿ:-ಜೇಸಿಐ ಉಡುಪಿ ಇಂದ್ರಾಳಿ ವತಿಯಿಂದ ಶಿವರಾತ್ರಿಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.ಇಂದ್ರಾಳಿ ರುದ್ರಭೂಮಿಯಲ್ಲಿ ಕಾವಲುಗಾರರಾಗಿ ಕೆಲಸ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರಮೇಶ್ ಅಂಬಾಗಿಲು ರವರನ್ನು ಫೆ.24 ಶುಕ್ರವಾರ ದಂದು ರುದ್ರಭೂಮಿಯ ವಠಾರದಲ್ಲಿ ಸಾರ್ವಜನಿಕವಾಗಿ ¸ನ್ಮಾನಿಸಲಾಯಿತು.

raghu

ಸನ್ಮಾನಿಸಿ ಮಾತನಾಡಿದ ಜೇಸಿಐ ವಲಯ 15 ವಲಯಾದ್ಯಕ್ಷ ಸಂತೋಷ್ ಜಿ,ರುದ್ರಭೂಮಿಯಲ್ಲಿ ಶವ ಸಂಸ್ಕಾರದ ಕೆಲಸವನ್ನು ದೇವರÀ ಕೆಲಸ ಎಂದು ಪ್ರಾಮಾಣಿಕವಾಗಿ ನಿರ್ವಹಿಸಿ ಬರುತ್ತಿರುವ ರಮೇಶ್ ರವರನ್ನು ಗೌರವಿಸಿರುವುದು ಅಭಿನಂದನೀಯ ಎಂದರು.
ಅಂತಿಮ ಸಂಸ್ಕಾರದ ವೇಳೆ ಒಬ್ಬರ ಬೂದಿ ಮತ್ತೊಬ್ಬರಿಗೆ ಹೋಗಬಾರದು ಎಂಬ ನೈತಿಕ ವಿಷಯದಿಂದ ಅತ್ಯುತ್ತಮವಾಗಿ ಸುಚಿತ್ವವನ್ನು ಕಾಪಾಡಿಕೊಂಡು ಬಂದಿರುವುದು ಇವರ ಕೆಲಸದ ನಿದರ್ಶನ ಎಂದರು.
ಕಾರ್ಯಕ್ರಮದಲ್ಲಿ ಹಿಂದೂ ರುದ್ರಭೂಮಿ ಶವ ಸಂಸ್ಕಾರ ಸೇವಾ ಸಮಿತಿಯ ಅದ್ಯಕ್ಷ ಕುಶಲ ಶೆಟ್ಟಿ ಇಂದ್ರಾಳಿ, ನಗರಸಭಾ ಸದಸ್ಯರಾದ ವಿಜಯ ಮಂಚಿ,ನಿಕಟಪೂರ್ವ ವಲಯಾದ್ಯಕ್ಷ ಸಂದೀಪ್ ಕುಮಾರ್,ವಲಯ ನಿರ್ದೇಶಕ ಅನಿಲ್ ಕುಮಾರ್,ವಲಯಾಧಿಕಾರಿಗಳಾದ ರಾಘವೇಂದ್ರ ಪ್ರಭು ಕರ್ವಾಲು,ಶ್ರೀನಿವಾಸ ಜಿ,ಜೇಸಿಐ ಉಡುಪಿ ಸಿಲ್ವರ್ ಸ್ಠಾರ್ ಅದ್ಯಕ್ಷೆ ಜ್ಯೋತಿ ರಮನಾಥ ಶೆಟ್ಟಿ,ಸಾಸ್ತಾನ ವೈಭ್ರೆಂಟ್ ಅದ್ಯಕ್ಷ ದಿನೇಶ್ ಭಾಂದವ್ಯ,ದೇವೇಂದ್ರ ನಾಯಕ್ ಎಸ್ಕೆ ಸ್ಟುಡಿಯೋದ ಶ್ರೀಪತಿ,ಉಡುಪಿ ಇಂದ್ರಾಳಿಯ ಅಶೋಕ್, ಹರಿಪ್ರಸಾದ್,ರೇವತಿ ಶ್ರೀನಿವಾಸ್ ಮುಂತಾದವರಿದ್ದರು.
ಅದ್ಯಕ್ಷೆ ಶೆರ್ಲಿ ಮನೋಜ್ ಅದ್ಯಕ್ಷತೆ ವಹಿಸಿ ಸ್ವಾಗತಿಸಿದರು.ವಲಯಾಧಿಕಾರಿ ಮನೋಜ್ ಕಡಬ ವಂದಿಸಿದರು.

By suddi9

Leave a Reply

Your email address will not be published. Required fields are marked *