ಮೂಡುಬಿದಿರೆ: ನಾಗರಕಟ್ಟೆ ಎಂಬಲ್ಲಿ ನಡೆಯುತ್ತಿದ್ದ ಅನಧಿಕೃತ ಕೋಳಿ ಅಂಕ ಕೇಂದ್ರ ಮೂಡುಬಿದಿರೆ ಪೊಲೀಸರು ಮಂಗಳವಾರ ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿ ಹಲವು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಒಂಟಿಕಟ್ಟೆಯ ಮನೆಯೊಂದರ ಕೋಲದ ಪ್ರಯುಕ್ತ ಸೋಮವಾರ ನಾಗರಕಟ್ಟೆಯಲ್ಲಿ ಕೊಳಿ ಅಂಕ ನಡೆದಿತ್ತು. ಮೊದಲ ದಿನ ಪೊಲೀಸರ ಅನುಮತಿಯಿದ್ದು ಕೋಳಿ ಅಂಕ ನಡೆದಿತ್ತೆನ್ನಲಾಗಿದೆ. ಆದರೆ ಪೊಲೀಸರ ಅನುಮತಿಯಿಲ್ಲದೆ ಎರಡನೇ ದಿನ ಕೋಳಿ ಅಂಕ ನಡೆಯಿತ್ತೆನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಮಂಗಳವಾರ ಮಧ್ಯಾಹ್ನ ಪೊಲೀಸರು ಕೋಳಿ ಅಂಕಕ್ಕೆ ದಾಳಿ ನಡೆಸಿ 11 ಮಂದಿಯನ್ನು ದಸ್ತಗಿರಿ ಮಾಡಿ ಎರಡು ಕೊಳಿಗಳನ್ನು ವಶಕ್ಕೆ ಪಡಕೊಂಡಿದ್ದಾರೆ. ಪೊಲೀಸ್ ದಾಳಿಗೆ ಹೆದರಿ ಹಲವರು ತಮ್ಮ ವಾಹನಗಳನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದು ದ್ವಿಚಕ್ರ ಹಾಗೂ ರಿಕ್ಷಾ ಸೇರಿದಂತೆ 15 ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಜಾಮೀನಿನ ಮೇರೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

By Suddi9

Leave a Reply

Your email address will not be published. Required fields are marked *