ಉಡುಪಿ:-ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ ಇದರ ವಾರ್ಷಿಕೋತ್ಸವ ಸಮಾರಂಭ ಫೆ.18 ಶನಿವಾರ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಪ್ರಾಂಶುಪಾಲ ಮ್ಯಾಥ್ಯು ಸಿ ನೈನನಗ ಮಾತನಾಡಿ ವಿದ್ಯಾಥಿಗಳು ತಮಗೆ ಸಿಗುವ ಅವಕಾಶ ಬಳಸಬೇಕು ಉತ್ತಮ ಶಿಕ್ಷಣ ಬದುಕಿಗೆ ಆಶ್ರಯವಾಗುತ್ತದೆ ಹಣ ಸಂಪತ್ತು ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ ಎಂದರು.

ಅದ್ಯಕ್ಷತೆಯನ್ನು ಕಾಲೇಜಿನ,ಮುಖ್ಯ ಟ್ರಸ್ಟಿ ಸುದಾಕರ ಪೈ ವಹಿಸಿ ಶುಭ ಹಾರೈಸಿದರು.ಪ್ರಾಂಶುಪಾಲೆ ರಾಧಿಕಾ ಪೈ ವರದಿ ವಾಚಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ದಯಾನಂದ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು,ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಮುಂತಾದವರು ಉಪಸ್ಥಿತರಿದ್ದರು. ಭವಾನಿ ನಿರೂಪಿಸಿದರು.ಪ್ರತಿಭಾ ಭಟ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.
