ಪಾದೆಬೆಟ್ಟು ಇತ್ತೀಚೆಗೆ ನಡೆದ ವಸಯಿ ಕರ್ನಾಟಕ ಸಂಘದ 27ನೇ ವಾರ್ಷಿಕ ಮಹಾ ಸಭೆಯಲ್ಲಿ ನೂತನಅಧ್ಯಕ್ಷರನ್ನಾಗಿ ಶ್ರೀಯುತ ಪಾದೆಬೆಟ್ಟು ಓ. ಪಿ. ಪೂಜಾರಿಯವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶ್ರೀಮತಿ ಮೋಹಿನಿ ಸಂಜೀವ ಮಲ್ಪೆ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶ್ರೀಮತಿ ಜಯ ಅಶೋಕ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕಾರಿ ಸಮಿತಿಯ ವಿಸ್ತರಣೆ ಮತ್ತು ಇನ್ನಿತರ ಸದಸ್ಯರ ನೇಮಕ ಶೀಘ್ರದಲ್ಲಿ ಮಾಡಲಾಗುವುದು.ಅಧ್ಯಕ್ಷರಾದ ಶ್ರೀಯುತ ಓ. ಪಿ. ಪೂಜಾರಿಯವರು ಮಾತೃ ಸಂಸ್ಥೆಯಾದ ವಸಯಿ ಕರ್ನಾಟಕಸಂಘದಲ್ಲಿ ಸುಮಾರು 12 ವರ್ಷ ಕಾರ್ಯದರ್ಶಿಯಾಗಿ, 4 ವರ್ಷ ಜೊತೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅದೇ ಅಲ್ಲದೆ ಕರ್ನಾಟಕ ಸಂಘದ ಕರ್ನಾಟಕ ಕೋ. ಅಪರೇಟಿವ್ ಸೊಸೈಟಿಯಲ್ಲಿ ಕಳೆದ12 ವರ್ಷಗಳಿಂದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಕೋಶಾಧಿಕಾರಿಯಾಗಿ ಹಾಗೂ ಪ್ರಸ್ತುತ ಗೌರವ ಕಾರ್ಯದರ್ಶಿಯಾಗಿದ್ದಾರೆ.ಕಾರ್ಮಿಕ ಸಂಸ್ಥೆಯಾದ ಶ್ರೀ ಗುರುನಾರಾಯಣ ಸೇವಾ ಸಮಿತಿ ವಸಯಿ ಇದರಲ್ಲಿ ಕಳೆದ 25ವರ್ಷದಿಂದ ಗೌರವ ಪ್ರ. ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ,
ಇದೇ ಅಲ್ಲದೆ ತಾನು ವಾಸವಾಗಿರುವ ಹೌಸಿಂಗ್ ಸೊಸೈಟಿಯಲ್ಲಿ ಕಳೆದ 31 ವರ್ಷದಿಂದ ಕಾರ್ಯಕಾರಿ ಸಮಿತಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು ಪ್ರಸಕ್ತ ಸಾಲಿನಲ್ಲಿ ಕಾರ್ಯಧ್ಯಕ್ಷರಾಗಿದ್ದಾರೆ.ಅಧ್ಯಕ್ಷರಾದ ಶ್ರೀ ಓ. ಪಿ. ಪೂಜಾರಿಯವರು ಮಾತೃ ಸಂಘವಾದ ವಸಯಿ ಕರ್ನಾಟಕ ಸಂಘಕ್ಕೆ ವಿವಿಧಸಂಘ ಸಂಸ್ಥೆಗಳಿಂದ ಮತ್ತು ಇಷ್ಟರವರೆಗೆ ಶ್ರಮಿಸಿದ ಪದಾಧಿಕಾರಿಗಳಿಂದ ಮತ್ತು ಸದಸ್ಯರಿಂದ ಮುಂದೆ ಕೂಡಸಹಕಾರವನ್ನು ಕೋರಿದ್ದಾರೆ.ಇವರ ಅಧ್ಯಕ್ಷತೆಯ ಕಾಲಾವಾಧಿಯಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ನಡೆಯಲಿ ಮತ್ತು ಸಂಘದ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ನಿರ್ಗಮಿತ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ,ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸರ್ವ ಸದಸ್ಯರು ಹಾರೈಸಿದ್ದಾರೆ.
