ವಿಟ್ಲ: ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಜೀವನ ದರ್ಶನ ಕಾರ್ಯಕ್ರಮದಡಿಯಲ್ಲಿ ‘ನೀರಿನ ಸಾಕ್ಷರತೆಯಲ್ಲಿ ಒಂದು ದಿನ’ ಕಾರ್ಯಕ್ರಮವು ರಾಜ್ಯ ಪ್ರಶಸ್ತಿ ಪುರಸ್ಕøತ ಸಂಪನ್ಮೂಲ ವ್ಯಕ್ತಿ ಶ್ರೀಯುತ ರಮೇಶ್ ಬಾಯಾರ್ ಮಕ್ಕಳೊಂದಿಗೆ ಸಂವಾದ ನಡೆಸುವುದರ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೀರಿನ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಸ್ಥಳದಲ್ಲೇ ಬಹುಮಾನ ಕೊಡುವುದರ ಮೂಲಕ ಮಕ್ಕಳಲ್ಲಿ ಆಸಕ್ತಿ ತುಂಬಿದರು. ಆದೇ ದಿನ ಬೆಳಿಗ್ಗೆ ‘ಜಲ ಸಾಕ್ಷರತೆಯ 55 ಪ್ರಶ್ನೆಗಳು’ ಪ್ರಶ್ನಾಪತ್ರಿಕೆಯನ್ನು ನೀಡಿ, ಜಲಸಾಕ್ಷರತೆಯ ಅರಿವು ಮೂಡುವಂತೆ ಪರೀಕ್ಷೆ ನಡೆಸಲಾಯಿತು. 6, 7 ಮತ್ತು 8ನೇ ತರಗತಿಯ ಒಟ್ಟು 230 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿ, ತರಗತಿವಾರು ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

ja smrakshane (2)

By suddi9

Leave a Reply

Your email address will not be published. Required fields are marked *