ವಿಟ್ಲ : “ ಮಕ್ಕಳ ಶೈಕ್ಷಣಿಕ ಹಾಗೂ ಬೌದ್ದಿಕ ಬೆಳವಣಿಗೆಯೇ ನಮ್ಮ ಸಂಸ್ಥೆಯ ಪ್ರಮುಖ ಗುರಿ ಎಂದು ಶಾಲಾ ಆಡಳಿತಾಧಿಕಾರಿಯಾದ ಸಿ.ಶ್ರೀಧರ್ ರವರು ಹೇಳಿದರು . ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಗುರುವಾರ ನಡೆದ ಪೋಷಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು . “ಮಗುವಿಗೆ ದೇವರು ಪ್ರಕೃತಿದತ್ತವಾಗಿ ಕೊಟ್ಟಿರುವ ಪ್ರತಿಭೆಯನ್ನು ಬಳಸಲು ಅವಕಾಶ ನೀಡಿ , ವಿಸ್ತ್ರೃತವಾಗಿ ಜ್ಞಾನ ಸಂಪಾದಿಸಲು ಪ್ರೇರೇಪಿಸಬೇಕೆಂದು ಪೋಷಕರಿಗೆ ಸಲಹೆ ನೀಡಿದರು . ಶಾಲಾ ಸಂಚಾಲಕರು ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಪ್ರಹ್ಲಾದ್ .ಜೆ.ಶೆಟ್ಟಿಯವರು ಮಾತನಾಡಿ ವಿದ್ಯಾಸಂಸ್ಥೆಯ ಅಭಿವೃದ್ಧಿಯೇನಮ್ಮ್ಮ ಧ್ಯೇಯ. ಇದಕ್ಕೆ ಪೋಷಕರ ಸಹಕಾರ ಅತೀ ಅಗತ್ಯ ಎಂದರು. ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷರಾದ ಕೆ.ಬಾಲಕೃಷ್ಣ ಆಳ್ವರವರು ಮಾತನಾಡಿ ಪೋಷಕರು ತಮ್ಮ ಜವಬ್ದಾರಿಗಳನ್ನು ಅರಿತು ಸಮರ್ಥವಾಗಿ ನಿಭಾಯಿಸಬೇಕೆಂದು ಕಿವಿ ಮಾತು ಹೇಳಿದರು ,
ಸಭೆಯಲ್ಲಿ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ ರವರು “ದಡಾರ ಹಾಗೂ ರುಬೆಲ್ಲಾ ಚುಚ್ಚುಮದ್ದು” ನೀಡುವುದರ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಿದರು . ನಂತರ ಶಿಕ್ಷಕ-ರಕ್ಷಕ ಸಂಘದ ವರದಿ ವಾಚನವನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾದ ಶಾಲಿನಿಯವರು ಹಾಗೂ ಲೆಕ್ಕ ಪತ್ರ ಮಂಡನೆಯನ್ನು ಗಣೇಶ್ ಭಟ್‍ರವರು ಮಂಡಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಬಿ .ಎಸ್ . ನಾಯಕ್ ,ಕಾರ್ಯದರ್ಶಿ ಕೊಂಬಿಲ ನಾರಾಯಣ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯಿನಿಯರಾದ , ವಿಜಯಲಕ್ಷ್ಮೀ ವಿ.ಶೆಟ್ಟಿ ಮತ್ತು ಗ್ರೇಸ್ ಪಿ.ಸಲ್ಡಾನಾ ಉಪಸ್ಥಿತರಿದ್ದರು .
ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ಕಸ್ತೂರಿ .ಪಿ. ಶೆಟ್ಟಿ ಯವರು ಸ್ವಾಗತಿಸಿದರು .ಶಿಕ್ಷಕಿಯರಾದ ಮೋಹಿನಿ ಎ.ರೈ ಯವರು ವಂದಿಸಿ, ಯಶೋಧ .ಕೆ ಯವರು ಕಾರ್ಯಕ್ರಮ ನಿರ್ವಹಿಸಿದರು .

