ಬೆಳ್ತಂಗಡಿ: ನಾರಾವಿ ಪರಿಸರದ ಒಂದು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕಳೆದ 6ವರ್ಷಗಳಿಂದ ತುಳುರಂಗಭೂಮಿಗೆ ತನ್ನದೇ ಆದ ಕಲಾಸೇವೆಯನ್ನು ನೀಡುತ್ತಾ ಬಂದಿರುವ ಮೋಕೆದ ಕಲಾವಿದೆರ್ ಕುತ್ಲೂರು ಇವರ ಈ ವರ್ಷದ ಹೊಸ ಕಲಾ ಕಾಣಿಕೆ “ಇನಿ ಅತ್ತ್ಂಡ ಎಲ್ಲೆ” ನಾಟಕ ಇದೇ ಬರುವ ಫೆ.13ರಂದು ಮರೋಡಿ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ.
ಜನಪ್ರಿಯ ನಾಟಕಗಳಾದ ‘ಏರಾ ಉಲ್ಲೆರ್ ಈ ಇಲ್ಲಡ್’ , ‘ಕೊಪ್ಪರಿಗೆ’ಯಂತಹ ವಿಭಿನ್ನ ಶೈಲಿಯ ನಾಟಕಗಳನ್ನು ರಚಿಸಿ ರಂಗಭೂಮಿಗೆ ನೀಡಿರುವ ತುಳುವೆರೆ ತುಡರ್ ಕಲಾ ತಂಡದ ಸಾರಥಿ ‘ಮಧುಬಂಗೇರ ಕಲ್ಲಡ್ಕ’ ರಚಿಸಿ ನಿರ್ದೇಶಿಸಿರುವ ಈ ನಾಟಕಕ್ಕೆ ತೌಲವ ಪ್ರಶಸ್ತಿ ವಿಜೇತ ಸಾಹಿತ್ಯ ವಿಚಕ್ಷಣ ವಸಂತ ಅಮೀನ್ರವರ ಸಾಹಿತ್ಯದ ಜೊತೆಗೆ ಸಂಗೀತ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೇಯಸ್ ಕಲ್ಲಡ್ಕರವರ ಸಂಗೀತವಿದ್ದು, “ಪಟ್ಟದಾಯಗ್ಲಾ ನಟ್ಟುನ ಸ್ಥಿತಿ ಬರುಯಾ ನರಮಾನಿ” ಖ್ಯಾತಿಯ ಗಾಯಕ ಸೋಮನಾಥ ಮಂಗಲಪಾಡಿಯವರ ಸುಮಧುರ ಹಾಡುಗಳಿವೆ.
ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ಉದ್ದೇಶವನ್ನು ಹೊಂದಿರುವ ಈ ತಂಡದಲ್ಲಿ ಬಹುತೇಕ ಸ್ಥಳೀಯ ಹೊಸ ಕಲಾವಿದರನ್ನು ಈ ನಾಟಕಕ್ಕೆ ಆಯ್ಕೆ ಮಾಡಿಕೊಂಡಿದ್ದು, ಇವರೊಂದಿಗೆ ತುಳುವೆರ್ ಕಲಾತಂಡದ ಹಾಸ್ಯ ಕಲಾವಿದರಾದ ಧೀರಜ್ ನೀರ್ಮಾರ್ಗ, ದಯಾನಂದ ಸಿದ್ಧಕಟ್ಟೆ, ಮತ್ತು ತಿಲಕ್ರಾಜ್ ಕಾಟಿಪಳ್ಳ ಇವರುಗಳು ಎರಡುವರೆ ಗಂಟೆಗಳ ಕಾಲ ಕಲಾಭಿಮಾನಿಗಳನ್ನು ರಂಜಿಸುವುದರಲ್ಲಿ ಸಂಶಯವಿಲ್ಲ.
ಸಮಾಜಕ್ಕೊಂದು ಅತ್ಯುನ್ನತ ಸಂದೇಶವನ್ನೀಡುವ ಕಲಾಹಂದದರವನ್ನು ಹೊಂದಿರುವ ಈ ನಾಟಕದ ಮಹಾ ಪಾತ್ರಧಾರಿಗಳಾಗಿ ಸತೀಶ್ ಶಿರ್ಲಾಲ್, ವಿಶ್ವನಾಥ್ ಶ್ರಾವ್ಯ, ಸಂಕೇತ್ ನೆಲ್ಲಿಕಾರ್, ಸುರೇಶ್ ಹೊಸ್ಮಾರ್, ಪ್ರದೀಪ್ ನೆಲ್ಲಿಕಾರ್, ಹೇಮಚಂದ್ರ ಸರಸ್ವತಿ ಮಂಗಳೂರು, ದೀಪಕ್ ಕಾಶಿಪಟ್ನ, ವಿಜಯ ನಾರಾವಿ, ನಿಧಿಶಾ ಎನ್.ಶೆಟ್ಟಿ ಈದು, ಚಂದನಾ ಮುನಿಯಾಲ್, ರಾಹುಲ್ ಜೈನ್ ವರಂಗ, ಅಭಿನಯಿಸಲಿದ್ದಾರೆ. ಗುರುರಾಜ್ ಪಿ. ಕುಕ್ಕಿಪಾಡಿ ಅವರ ಸಂಪೂರ್ಣ ಸಹಕಾರದೊಂದಿಗೆ ಅಶೋಕ್ ಮತ್ತು ಯಶೋಧರ್ ಕುತ್ಲೂರು ಅವರ ಸಾರಥ್ಯದ ಈ ತಂಡಕ್ಕೆ ಕಲಾಭಿಮಾನಿಗಳು ಸರ್ವ ರೀತಿಯ ಸಹಕಾರ ನೀಡಬೇಕೆಂದು ತಂಡದ ಸಾರಥಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

