ಮೂಡುಬಿದರೆ: ಸಮೀಪದ ಕಲ್ಲಬೆಟ್ಟು ಮಾರಿಗುಡಿ ಬಳಿ ಶುಕ್ರವಾರ ಸಂಜೆ ನೀರಿನ ಟ್ಯಾಂಕರನ್ನು ರಿಕ್ಷಾಕ್ಕೆ ಡಿಕ್ಕಿ ಹೊಡೆಸಿ ಆಟೋ ಚಾಲಕನ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಘಟನೆಯಲ್ಲಿ ಆಟೋ ಚಾಲಕ ಪೇಪರ್ಮಿ ನಿವಾಸಿ ಅಲ್ತಾಪ್(28)ಗಾಯಗೊಂಡು ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜತೆಯಲ್ಲಿದ್ದ ಮಂಗಳೂರಿನ ಶಶಿಧರ್ ಮತ್ತು ಸುರೇಶ್ಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಅಲ್ತಾಪ್ ಮೂಡುಬಿದರೆಯ ಅಂಗಡಿಯೊಂದರಿಂದ ಟ.ವಿ ಖರೀದಿಸಿದ್ದು ಅದಕ್ಕೆ ಮಂಗಳೂರಿನ ಫೈನಾನ್ಸೊಂದರಿಂದ ಸಾಲ ಪಡೆದಿದ್ದನೆನ್ನಲಾಗಿದೆ. ಸಾಲದ 7 ಸಾವಿರ ಮುಂಗಡ ಹಣವನ್ನು ಈತನ ದೊಡ್ಡಪ್ಪನ ಮಗ ಕಲ್ಲಬೆಟ್ಟಿನ ಬಾವು ನಿಡಿದ್ದರು. ಟಿ.ವಿಯನ್ನು ಬಾವುನ ಮನೆಯಲ್ಲಿ ಇಡಲಾಗಿತ್ತು. ಕೆಲವು ಕಂತು ಅಲ್ತಾಪ್ ಕಟ್ಟಿದ್ದರೆ ಉಳಿದ 5 ಕಂತನ್ನು ಬಾವುನಿಗೆ ಕಟ್ಟಲು ಅಲ್ತಾಪ್ ಹೇಳಿದ್ದರೂ ಆತ ಕಂತು ಕಟ್ಟದೆ ಬಾಕಿಯಿಟ್ಟದ್ದ ಎನ್ನಲಾಗಿದೆ. ಸಾಲ ನೀಡಿದ ಮಂಗಳೂರಿನ ಕ್ಯಾಪಿಟಲ್ ಹೆಸರಿನ ಖಾಸಗಿ ಹಣಕಾಸು ಸಂಸ್ಥೆಯವರು ಅಲ್ತಾಪ್ಗೆ ಫೋನ್ ಮಾಡಿ ಹಣ ಕಟ್ಟುವಂತೆ ಪೀಡಿಸತೊಡಗಿದಾಗ ನನ್ನಿಂದ ಹಣ ಕಟ್ಟಲು ಸಾದ್ಯವಿಲ್ಲ ಬೇಕಾದರೆ ಟಿ.ವಿಯನ್ನು ಕೊಂಡೊಯ್ಯಿರಿ ಎಂದು ಹೇಳಿದ್ದಾರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಫೈನಾನ್ಸ್ ಸಂಸ್ಥೆಯಿಂದ ಶಶಿಧರ್ ಮತ್ತು ಸುರೇಶ್ ಶುಕ್ರವಾರ ಸಂಜೆ ಮೂಡುಬಿದರೆಗೆ ಬಂದು ಅಲ್ತಾಪ್ನ ರಿಕ್ಷಾದಲ್ಲಿ ಕಲ್ಲಬೆಟ್ಟುವಿನಲ್ಲಿರುವ ಬಾವು ಮನೆಗೆ ಹೋಗಿ ಅಲ್ಲಿದ್ದ ಟಿ.ವಿಯನ್ನು ರಿಕ್ಷಾದಲ್ಲಿ ಹಾಕಿಕೊಂಡು ವಾಪಾಸು ಮೂಡುಬಿದರೆಗೆ ಹೊರಟರು. ಈ ಸುದ್ದಿ ತಿಳಿದ ಬಾವು ತಾನು ಕೆಲಸ ಮಾಡುತ್ತಿದ್ದ ನೀರಿನ ಟ್ಯಾಂಕರನ್ನು ಚಲಾಯಿಸಿಕೊಂಡು ಮನೆಗೆ ಹೊರಟ. ಕಲ್ಲಬೆಟ್ಟು ಮಾರಿಗುಡಿಯಲ್ಲಿ ಎದುರಾದ ರಿಕ್ಷಾಕ್ಕೆ ತನ್ನ ಟ್ಯಾಂಕರನ್ನು ಡಿಕ್ಕಿ ಹೊಡೆಸಿ ಮುಂದೆ ಹೋದ. ಅಲ್ಲಿಂದ ಟ್ಯಾಂಕರನ್ನು ರಿವಸರ್್ ತಂದು ಆಟೋಗೆ ಹಿಂದಿನಿಂದ ಡಿಕ್ಕಿ ಹೊಡೆಸಿ ನಂತರ ಪರಾರಿಯಾಗಿದ್ದಾನೆ. ಆರೋಪಿ ವಿರುದ್ಧ ಮೂಡುಬಿದರೆ ಪೊಲೀಸರು ಕೊಲೆ ಯತ್ನ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

