ಮಂಗಳೂರು: ದೇಯಿ ಬೈದೈತಿ-ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದಲ್ಲಿ ಫೆ.19ರಂದು ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ನಮ್ಮ ನಡೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕಡೆಗೆ ಎನ್ನುವ ಬೃಹತ್ ವಾಹನ ಜಾಥಾಕ್ಕೆ ರೂಪುರೇಷೆ, ಪೂರ್ವಸಿದ್ಧತೆಯ ಸಮಾಲೋಚನಾ ಸಭೆಯು ಮಂಗಳೂರಿನ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರ ಕಂಕನಾಡಿಯಲ್ಲಿ ಜ.24ರಂದು ಜರುಗಿತು.

