ಮಂಗಳೂರು: ಭಾರತದ ವಿತ್ತ ಸಚಿವ ಅರುಣ್ ಜೇಟ್ಲಿಯವರು ಮಂಡಿಸಿದ 2014-15ರ ಬಜೆಟ್ ಪ್ರಾದೇಶಿಕ ಸಮತೋಲನ ಹೊಂದಿದ್ದು ಹಣದುಬ್ಬರ ಇಳಿಕೆಯಾಗಿ, ಜಿಡಿಪಿ ಪ್ರಗತಿಪರ ಏರಿಕೆಯಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಘಟಕ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.money

ಬೆಲೆಯೇರಿಕೆಗೆ ಕಡಿವಾಣ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ಕೊಟ್ಟ ಬಜೆಟ್ ಜಾಗತಿಕ ವಿದ್ಯಮಾನ ಮತ್ತು ಮುಂಗಾರು ಮಳೆಯ ಕೊರತೆಯ ನಡುವೆಯೂ ಜನಪರ ಬಜೆಟ್ ಆಗಿದೆ.ಪ್ರವಾಸೋದ್ಯಮ, ಕುಡಿಯುವ ನೀರು, ಪ್ರತಿ ಮನೆಗೂ ಶೌಚಾಲಯ, ದೇಶಾದ್ಯಂತ 100 ಸ್ಮಾಟರ್್ ಸಿಟಿ ರಚನೆ, ನೀರಾವರಿ ಯೋಜನೆಗಳು, ಇ-ವೀಸಾ ಸೇವೆ, 24 ಗಂಟೆ ಗುಣಮಟ್ಟದ ವಿದ್ಯುತ್, ಹಿರಿಯ ನಾಗರಿಕರಿಗೆ ನಿವೃತ್ತಿ ವೇತನ, ಮಂದಿರ ಮತ್ತು ಮದರಸಾಗಳ ಆಧುನೀಕರಣಕ್ಕೆ ಸಹಾಯಧನ ಇತ್ಯಾದಿಗಳಿಗೆ ಆದ್ಯತೆ ನೀಡಿ ದೇಶದ ಪ್ರಧಾನಿಯವರು ಈಗಾಗಲೇ ಹೇಳಿದಂತೆ 2+3 ಫಾಮರ್ುಲಾದಂತೆ ಪ್ರಥಮ 2 ವರ್ಷ ಕಠಿಣಕ್ರಮ ನಂತರದ 3 ವರ್ಷಗಳು ಅಭಿವೃದ್ಧಿ ಕ್ರಿಯಾಶೀಲವಾಗಿದ್ದು ಒಳ್ಳೆಯ ದಿನಗಳು ಬರಲಿವೆ ಎಂದು ಮಾಜಿ ಶಾಸಕ, ಜಿಲ್ಲಾವಕ್ತಾರ ಕೆ. ಜಯರಾಮ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

By Suddi9

Leave a Reply

Your email address will not be published. Required fields are marked *