ಮೂಡುಬಿದಿರೆ: ಸುರತ್ಕಲ್‍ನ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಹಾಗೂ ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ `ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ-ಸಮ್ಮಾನ-ಅಗರಿ ಸಪ್ತಸ್ವರ‘ ಕಾರ್ಯಕ್ರಮವು ಜ.22ರಂದು ಅಪರಾಹ್ನ ಗಂ.2ರಿಂದ ಮೂಡಬಿದಿರೆ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಸಮಿತಿ ಕಾಯಾಧ್ಯಕ್ಷ ಅಗರಿ ರಾಘವೇಂದ್ರ ರಾವ್ ಸುದ್ದಿಗೋಷ್ಠಿ ತಿಳಿಸಿದರು.

5232

ಅಗರಿ ಶೈಲಿಯ ಜನಕ, ಗಿನ್ನೆಸ್ ದಾಖಲೆಯ ದೇವೀ ಮಹಾತ್ಮೆ ಪ್ರಸಂಗಕರ್ತರಾಗಿ, ಶೇಣಿ, ಸಾಮಗ, ತೆಕ್ಕಟ್ಟೆಯವರಂಥ ಮೇರು ಕಲಾವಿದರಿಗೆ ರಂಗನಿರ್ದೇಶಕರಾಗಿ ಗಣಗಳ ಗೇಯತೆಯನ್ನು ಗಾನಾಭಿವ್ಯಕ್ತಿಯಲ್ಲಿ ಸಜೀವಗೊಳಿಸಿದ ಅಗರಿ ಶ್ರೀನಿವಾಸ ಭಾಗವತರ 11ನೇ ವರ್ಷದ ಸಂಸ್ಮರಣೆ ಇದಾಗಿದೆ ಎಂದ ಅವರು ಸಮಾರಂಭದಲ್ಲಿ ಪ್ರಸಿದ್ಧ ಸ್ತ್ರೀ ಪಾತ್ರಧಾರಿ ಎಂ.ಕೆ. ರಮೇಶ ಆಚಾರ್ಯ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರ ಅಧ್ಯಕ್ಷತೆ, ಮೂಡಬಿದಿರೆ ಭಟ್ಟಾರಕ ಶ್ರೀಗಳ ಆಶೀರ್ವಚನದೊಂದಿಗೆ ಸಮ್ಮಾನಿಸಲಾಗುವುದು. ಡಾ. ಎಂ. ಪ್ರಭಾಕರ ಜೋಷಿ ಸಂಸ್ಮರಣಾ ಭಾಷಣ ಮಾಡಲಿರುವರು.

ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪಿ.ಕಿಶನ್ ಹೆಗ್ಡೆ ಅಭಿನಂದನಾ ಭಾಷಣ ಮಾಡಿದ್ದಾರೆ. ಕಟೀಲಿನ ಹರಿನಾರಾಯಣದಾಸ ಆಸ್ರಣ್ಣ, ಭಾಗವತ ಅಗರಿ ರಘುರಾಮ ರಾವ್, ಉದ್ಯಮಿ ಕೆ. ಶ್ರೀಪತಿ ಭಟ್, ಚಿತ್ರನಿರ್ಮಾಪಕ ಉದಯ ಶೆಟ್ಟಿ ಕಾಂತಾವರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. `ಶರಸೇತು’ ತಾಳಮದ್ದಲೆ, ಅಗರಿ ಭಾಗವತರ ಆಯ್ದ ಕೃತಿಗಳ ಪ್ರಸ್ತುತಿ `ಅಗರಿ ಸಪ್ತ ಸ್ವರ’ ಕಾರ್ಯಕ್ರಮ ನಡೆಯಲಿವೆ.

ಅಗರಿ ರಘುರಾಮ ಭಾಗವತರು, ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ, ಸುಬ್ರಾಯ ಮಾಸ್ತರ್ ಗಜಂತೋಡಿ, ಬೋಂದೆಲ್ ಸತೀಶ್ ಶೆಟ್ಟಿ, ಪರಮೇಶ್ವರ ಐತಾಳ ಪಣಂಬೂರು ಇವರು ನಡೆಸಿಕೊಡಲಿದ್ದು ಹಿಮ್ಮೇಳದಲ್ಲಿ ಪದ್ಯಾಣ ಶಂ. ನಾ. ಭಟ್, ಚೈತನ್ಯಕೃಷ್ಣ ಪದ್ಯಾಣ, ರವಿಪ್ರಸಾದ್ ಕೆ. ಶೆಟ್ಟಿ , ನಿರೂಪಕರಾಗಿ ಉಜಿರೆ ಅಶೋಕ ಭಟ್, ಸಂಯೋಜನೆಯಲ್ಲಿ ದೇವಾನಂದ ಭಟ್ ಸಹಕರಿಸಲಿದ್ದಾರೆ ಎಂದು ಅವರು ತಿಳಿಸಿದರು.

17-2

ಎರಡು ವಿಶೇಷ ಯೋಜನೆಗಳು:
ಅಗರಿ ಶೈಲಿಯನ್ನು ಮುಂದಿನ ತಲೆಮಾರಿನವರಿಗೆ ತಲುಪಿಸುವ ಉದ್ದೇಶದಿಂದ `2017ನೇ ವರ್ಷಪೂರ್ತಿ ರಂಗದಲ್ಲಿ ಅಗರಿಶೈಲಿಯನ್ನು ಅಳವಡಿಸಿ ಹಾಡುವ ಭಾಗವತರಿಗೆ `ಅಗರಿ ಎಂಟರ್‍ಪ್ರೈಸಸ್’ ವತಿಯಿಂದ ಎಲ್‍ಇಡಿ ಟಿ.ವಿ., ರೆಫ್ರಿಜರೇಟರ್, ವಾಶಿಂಗ್ ಮೆಶೀನ್ ಮೊದಲಾದ ಬಹುಮಾನಗಳನ್ನು ಉಡುಗೊರೆ ನೀಡಿ ಮಾನಿಸಲಾಗುವುದು. ಅಂದಂದಿನ ಹಾಡುಗಳ ಚಿತ್ರೀಕರಣದ ಪ್ರತಿಯನ್ನು ಅಗರಿ ಗ್ರೂಪ್‍ಗೆ ವಾಟ್ಸ್ ಆಪ್ ಮಾಡಬೇಕು ಎಂದ ಅವರು ಅಗರಿ ಶೈಲಿಯ ಭಾಗವತಿಕೆಯನ್ನು ಕಲಿಯಲು ಮುಂದೆ ಬರುವ ಓರ್ವ ವಿದ್ಯಾರ್ಥಿಯನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಗುವುದು ಎಂದು ಅವರ ಎರಡು ಹೊಸ ಯೋಜನೆಗಳನ್ನು ಪ್ರಕಟಿಸಿದರು.

ಸಮಿತಿಯ ಕಾರ್ಯದರ್ಶಿ ಅಗರಿ ವಾದಿರಾಜ ರಾವ್, ಯಕ್ಷಗಾನ ಸಂಘಟಕರಾದ ಎಂ.ದೇವಾನಂದ ಭಟ್, ಶಾಂತರಾಮ ಕುಡ್ವ, ಪತ್ರಕರ್ತ ರಂಜನ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

* ಅಗರಿ ಶೈಲಿಯ ಭಾಗವತರಿಗೆ ವಿಶಿಷ್ಟ ಬಹುಮಾನ
* ವಿದ್ಯಾರ್ಥಿಗೆ ಶೈಕ್ಷಣಿಕ ದತ್ತು ಯೋಜನೆ

By suddi9

Leave a Reply

Your email address will not be published. Required fields are marked *