ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ವಿದ್ಯಾರ್ಥಿಗಳು ಇರುವೈಲಿನಲ್ಲಿ ನೆಲ ಜಲ ಸಂರಕ್ಷಣೆಯ ಅಭಿಯಾನವನ್ನು ಶನಿವಾರ ಹಮ್ಮಿಕೊಂಡರು. ಕೃಷಿ-ಅಂತರ್ಜಲ ಅಭಿವೃದ್ಧಿಗಾಗಿ ಇರುವೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳು ನೀರಿನ ಒಡ್ಡುಗಳನ್ನು ನಿರ್ಮಿಸಿದರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

arts-3

arts-1

ಆಳ್ವಾಸ್ ಕಾಲೇಜಿನ ಕಲಾ ವಿಭಾಗದ ಡೀನ್ ಸಂಧ್ಯಾ ಕೆ.ಎಸ್, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಶೇಖರ್ ಮಯ್ಯ, ಅರ್ಥಶಾಸ್ತ್ರ ಉಪನ್ಯಾಸಕ ಎಂ.ಕೆ.ರವಿಂದ್ರ, ಅರ್ಥಶಾಸ್ತ್ರ ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ ಎನ್.ಗುರುದೇವ್, ರಾಜ್ಯಶಾಸ್ತ್ರ ಉಪನ್ಯಾಸಕಿ ದಿವ್ಯಾ, ಆಳ್ವಾಸ್ ಪದವಿ ಕಾಲೇಜಿನ ಕಲಾವಿಭಾಗದ ವಿದ್ಯಾರ್ಥಿಗಳು, ಎನ್‍ಎಸ್‍ಎಸ್ ಘಟಕದ ಸದಸ್ಯರು ಪಾಲ್ಗೊಂಡರು.

arts-2ರಾಜೇಶ್ವರಿ ಇನ್ಫ್ರಾಟೆಕ್‍ನ ಆಡಳಿತ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಒಡ್ಡು ನಿರ್ಮಾಣಕ್ಕೆ 400 ಸಿಮೆಂಟ್‍ನ ಚೀಲಗಳನ್ನು ನೀಡಿ ಹಾಗೂ ಅಭಿಯಾನಕ್ಕೆ ಪೂರಕವಾದ ವ್ಯವಸ್ಥೆಗಳನ್ನು ದಿನೇಶ್ ಶೆಟ್ಟಿ ಸಹಕರಿಸಿದರು.

By suddi9

Leave a Reply

Your email address will not be published. Required fields are marked *