ಮುಂಬಯಿ: ಮಹಾನಗರ ಮುಂಬಯಿಯಲ್ಲಿ ಕನ್ನಡಿಗ ಕಲಾವಿದರ ಒಕ್ಕೂಟದ ಅವಶ್ಯಕತೆ ಮನಗಂಡು ದಶಮಾನದ ಹಿಂದೆ ರೂಪುಗೊಂಡ ಕನ್ನಡ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದೀಗ ದಶಮಾನೋತ್ಸವದ ಹೊಸ್ತಿಲಲ್ಲಿದೆ. ಸಮಸ್ತ ಕಲಾವಿದರನ್ನು ಒಂದು ಗೂಡಿಸಿ ದಶಮಾನೋತ್ಸವವನ್ನು ಅರ್ಥಪೂರ್ಣವಾಗಿ ನಡೆಯಬೇಕೆಂದು ತೀರ್ಮಾನಿಸಿದೆ.

1

ಆ ಪ್ರಯುಕ್ತ ಬರುವ 2017ರ ಫೆಬ್ರವರಿ 25ರಂದು ನಡೆಸಲುದ್ದೇಶಿಸಿದ ದಶಮಾನೋತ್ಸವ ಉದ್ಘಾಟನಾ ಪೂರ್ವಸಿದ್ಧತೆಯ ಪ್ರಯುಕ್ತ ವಿಶೇಷ ಸಭೆಯನ್ನು ಇದೇ ಬರುವ ಶನಿವಾರ (ಜ.07) ಸಂಜೆ 5.00 ಗಂಟೆಗೆ ಬಿಲ್ಲವ ಭವನ, ಗುರುನಾರಾಯಣ ಮಾರ್ಗ, ವಕೋಲಾ ಸಮೀಪ, ಸಾಂತಾಕ್ರೂಜ್ ಪೂರ್ವ, ಮುಂಬಯಿ ಇಲ್ಲಿ ಪರಿಷತ್ತುನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ದಶಮಾನೋತ್ಸವ ಸಮಿತಿ ಗೌ| ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ಅಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ, ಕೈಪಿಡಿ ಕಾರ್ಯಾಧ್ಯಕ್ಷ ಜಿ.ಟಿ.ಆಚಾರ್ಯ ಮತ್ತಿತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜರುಗುವ ಸಭೆಯಲ್ಲಿ ಪರಿಷತ್ತುನ ಸರ್ವ ಸದಸ್ಯರು, ಕಲಾ ಸಂಘಟಕರು, ಕಲಾಪೋಷಕರು, ವಿವಿಧ ಸಂಘಸಂಸ್ಥೆಗ ಳ ಮುಖ್ಯಸ್ಥರು ಸಕಾಲದಲ್ಲಿ ಆಗಮಿಸಿ ಸಭೆಯ ಯಶಸ್ಸಿಗೆ ಸಹಕರಿಸುವಂತೆ ಪರಿಷತ್ತುನ ಗೌ| ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್ ಮತ್ತು ಗೌ| ಪ್ರ| ಕಾರ್ಯದರ್ಶಿ ನಾವುಂದ ರಾಜು ಶ್ರೀಯಾನ್ ಈ ಮೂಲಕ ವಿನಂತಿಸಿದ್ದಾರೆ.

By Suddi9

Leave a Reply

Your email address will not be published. Required fields are marked *