ಮೂಡುಬಿದಿರೆ: ಎಳವೆಯಲ್ಲಿಉತ್ತಮ ಮೌಲ್ಯಗಳನ್ನು ಬಿತ್ತಿದ್ದರೆ ಅವು ಜೀವನದುದ್ದಕ್ಕೂ ಜೊತೆಗಿರುತ್ತವೆ. ಪೋಷಕರ ಪ್ರೀತಿಯನ್ನು ಶಾಲೆಗಳಲ್ಲಿ ಗುರುಗಳು ಕೊಡಲು ಸಾಧ್ಯವಿಲ್ಲ. ಪೋಷಕರು ಮಕ್ಕಳ ಮೇಲೆ ವೈಯುಕ್ತಿಕ ಗಮನ ಕೊಟ್ಟಾಗ ನಿಜವಾಗಲೂ ಮಕ್ಕಳು ಉತ್ತಮ ಮೌಲ್ಯಯುತವಾಗಿ ಬೆಳೆಯುತ್ತಾರೆ. ಪ್ರೀತಿಯಲ್ಲಿ ಬೆಳೆದ ಮಕ್ಕಳು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಎಂದು ಅಲಂಗಾರು ಹೋಲಿ ರೋಸರಿ ಚರ್ಚ್ನ ಧರ್ಮಗುರು ಬಾಸಿಲ್ ವಾಸ್ ಹೇಳಿದರು.
ಮೂಡುಬಿದಿರೆ ಲಿಟ್ಲ್ ಪ್ಲವರ್ ನರ್ಸರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕ್ರಿಸ್ಮಸ್ ಆಚರಣೆ, ಹಿರಿಯರ ದಿನಾಚರಣೆ ಹಾಗೂ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲರಾದ ಎಮ್. ರಮೇಶ್ ಭಟ್, ಜೆಸಿಐ ರಾಷ್ಟ್ರೀಯ ತರಬೇತುದಾರರು ಧೀರೇಂದ್ರ ಜೈನ್, ಆಳ್ವಾಸ್ ಆರ್ಯವೇದಿಕ್ ಕಾಲೇಜಿನ ಅಧೀಕ್ಷಕಿ ಡಾ. ಝೆನಿಕಾ ಡಿ’ಸೋಜಾ ಮುಖ್ಯ ಅತಿಥಿಯಾಗಿದ್ದರು.
ಮಕ್ಕಳು ಹಾಗೂ ಪೋಷಕರು ಸೇರಿ ಮಾಡಿದ ಸಾಂಪ್ರದಾಯಿಕ ಅಡುಗೆ ಹಾಗೂ ನಕ್ಷತ್ರ ಮಾಡುವ ಸ್ಪರ್ದೆಯಲ್ಲಿ ಹಾಗೂ ಹಿರಿಯರಿಗೆ ಏರ್ಪಡಿಸಿದ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಲಿಟ್ಲ್ ಪ್ಲವರ್ ನರ್ಸರಿ ಶಾಲೆಯ ಸ್ಥಾಪಕ ಗುರುಪ್ರಸಾದ್ ಪೂಜಾರಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.ಶಾಲೆಯ ಶಿಕ್ಷಕಿ ಜ್ಯೋತಿ ಸ್ವಾಗತಿಸಿದರು. ಮೋಹಿನಿ ವಂದಿಸಿದರು. ಶಾಜಿಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

