ಸುರತ್ಕಲ್: ನಾಲ್ಕು ಮಂದಿ ಹೆಂಡತಿಯರಿದ್ದು 14ಮಕ್ಖಳಿಗೆ ತಂದೆಯಾದವ ಕಾಟಿಪಲ್ಲ ಎರಡನೇ ಬ್ಲಾಕ್ ನಿವಾಸಿ ಹಮೀದ್ (51) ಎಂಬಾತ ಇಷ್ಟೆಲ್ಲ ಇದ್ದರೂ ಕಾಮ ಅನ್ನೋದು ಆತನ ಬೆನ್ನು ಬಿಡಲಿಲ್ಲ. ಹಿಂದೆ ಬಾಡಿಗೆ ಮನೆಯಲ್ಲಿದ್ದ ವೇಳೆ ಪರಿಚಯವಾಗಿದ್ದ ಅಪ್ರಾಪ್ತ ಬಾಲಕಿಯನ್ನೇ ತನ್ನ ಕಾಮದ ಚಪಲ ತೀರಿಸಲು ಬಳಸಿಕೊಂಡ ಪಾಪಿ ಸುರತ್ಕಲ್ ಪೊಲೀಸರ ವಶವಾಗಿದ್ದಾನೆ .
ಅತ್ಯಾಚಾರಕ್ಕೆ ತುತ್ತಾಗಿರುವ 14ರ ಹರೆಯದ ಬಾಲಕಿ ತನ್ನ ಹೆತ್ತವರ ಜೊತೆ ಪಕ್ಕದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಈ ವೇಳೆ ಬಾಲಕಿಯ ಕುಟುಂಬಕ್ಕೆ ಆಪ್ತನಾಗಿದ್ದ ಈ ಕಾಮುಕ ಕ್ರಮೇಣ ಬಾಲಕಿಯ ಸ್ನೇಹವನ್ನೂ ಸಂಪಾದಿಸಿದ್ದಾನೆ. ಬಾಲಕಿಯ ಕುಟುಂಬ ಕಳೆದ ಜನವರಿ ತಿಂಗಳಲ್ಲಿ ಕಾನ-ಕಟ್ಲದ ಬಾಡಿಗೆ ಮನೆಗೆ ಸ್ಥಳಾಂತರಗೊಂಡ ಬಳಿಕವೂ ಅವರ ಜೊತೆ ಹಮೀದ್ ಹೋಗಿಬರುತ್ತಾ ಆತ್ಮೀಯನಾಗಿದ್ದ. ಆಗಷ್ಟೇ ವಯಸ್ಸಿಗೆ ಬಂದಿದ್ದ ಬಾಲಕಿಯ ಶಿಕ್ಷಣವನ್ನು ಹೆತ್ತವರು ಮೊಟಕುಗೊಳಿಸಿದ್ದು, ಅಕೆ ಮನೆಯಲ್ಲೇ ಇರುವುದರ ಲಾಭ ಪಡೆದುಕೊಂಡ ಕಾಮುಕ ಆಕೆಗೆ ಅದೂ, ಇದೂ ತಂದುಕೊಡುವ ಮೂಲಕ ಆಕೆಯ ಜೊತೆ ಪ್ರೀತಿ-ಪ್ರೇಮ ಎಂದು ಚಕ್ಕಂದವಾಡುತ್ತಿದ್ದ.
ಈತನಿಗೆ ನೆರೆಯ ಕಾಸರಗೋಡಿನಲ್ಲೂ ಸಂಸಾರವಿದೆ ಎನ್ನಲಾಗಿದೆ. ಆತನೇ ಹೇಳುವ ಪ್ರಕಾರ 14 ಮಂದಿ ಮಕ್ಕಳೂ ಇದ್ದಾರೆ. ಆದರೆ ಅದನ್ನೆಲ್ಲ ಮರೆತು ಅಪ್ರಾಪ್ತೆಯ ಸ್ನೇಹ ಸಂಪಾದಿಸಿ ಆಕೆಯನ್ನು ಮದುವೆ ಮಾಡಿಕೊಳ್ಳುವ ಭರವಸೆ ನೀಡಿದ ಕಾಮುಕ ಆಕೆಯೊಂದಿಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ಬಲವಂತವಾಗಿ ಲೈಂಗಿಕ ಸಂಪರ್ಕ ನಡೆಸುತ್ತಾನೆ. ಈ ವೇಳೆ ಬಾಲಕಿ ಭಯಪಟ್ಟರೂ ಆರೋಪಿ, `ಏನೂ ಆಗುವುದಿಲ್ಲ, ಸ್ವಲ್ಪ ಸಮಯ ಹೋಗಿ ನಿನಗೆ ಮದುವೆ ಪ್ರಾಯ ಬಂದಮೇಲೆ ನಾನೇ ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ’ ಎಂದು ನಂಬಿಸುತ್ತಾನೆ. ಬಾಲಕಿ ಏನೂ ಮಾತಾಡದೆ ಮೌನವಾಗಿದ್ದನ್ನೇ ಸಮ್ಮತಿ ಎಂದು ತಿಳಿದ ಆರೋಪಿ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವ ಸಮಯ ನೋಡಿಕೊಂಡು ಆಗಾಗ ಬಂದು ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಇದು ಬಾಲಕಿಯ ಮನೆಮಂದಿಯ ಗಮನಕ್ಕೂ ಬಂದಿರಲಿಲ್ಲ. ಸುರತ್ಕಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಆತನ ಮನೆಯಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯ ಮೇಲೆ ಅತ್ಯಾಚಾರ, ಮಕ್ಕಳ ಲೈಂಗಿಕ ದುರ್ಬಳಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಠಾಣಾಧಿಕಾರಿ ಎಂ.ಎ.ನಟರಾಜ್ `ಮಾಹಿತಿ ನೀಡಿದ್ದಾರೆ. ಅತ್ಯಾಚಾರ ಆರೋಪಿ ಹಮೀದ್ ನನ್ನು ಸೋಮವಾರ ಮಧ್ಯಾಹ್ನ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

