ಮಂಗಳೂರು: ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್ಫಂಡ್ ವಾಮಂಜೂರುಇದರವತಿಯಿಂದಲಿಂಗ ತಾರತಮ್ಯ ಮತ್ತು ಹದಿಹರೆಯದ ಸಮಸ್ಯೆಗಳ ಕುರಿತು ಕಾರ್ಯಗಾರವನ್ನುಶಾಲಾ ಶಿಕ್ಷಕರಿಗೆ ಡಿ30ರಂದು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಗಾರದಲ್ಲಿ ಮನಶಾಂತಿ ಆಪ್ತ ಸಮಾಲೋಚನ ಕೇಂದ್ರದ ಆಪ್ತ ಸಮಾಲೋಚಕರಾದ ರೀಮಾ, ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ನಂತರ ಶಿಕ್ಷಕರು. ಚಿಕ್ಕ ಮಕ್ಕಳು ಬಾಲ್ಯಾವಸ್ಥೆಯಲ್ಲಿ ತನಗೆ ಏನಾದರೂ ಸಮಸ್ಯೆಗಳು ಕಂಡು ಬಂದರೆ ಕುಟುಂಬದೊಂದಿಗೆ, ಶಾಲಾ ಹಂತದಲ್ಲಿ ಶಿಕ್ಷಕರ ಜೊತೆ, ಸ್ವಲ್ಪದೊಡ್ಡದಾದ ನಂತರ ಗೆಳೆಯರ ಜೊತೆ ಹಂಚಿಕೊಳ್ಳುತ್ತಾರೆ. ಈ ತರದ ಬೆಳವಣಿಗೆಯನ್ನು ಮಕ್ಕಳೇ ತನ್ನಿಂದತಾನೇ ಬೆಳೆಸಿಕೊಳ್ಳುತ್ತಾರೆ.ಇದಕ್ಕೆ ಕಾರಣಗಳು ಮುಖ್ಯವಾಗಿಅವರು ಬೆಳೆಯುತ್ತಿರುವಂತಹ ಪರಿಸರ, ಅವರು ಮಾಡುವಂತಹ ಸಂಗಡ ಹಾಗೂಅವರುಇರುವಂತಹ ಪರಿಸ್ಥಿತಿ ಕಾರಣಗಳಾಗಿದೆ ಎಂದು ತಿಳಿಸಿದರು.
ಪ್ರೌಢಾವಸ್ಥೆಯಲ್ಲಿ ಮಕ್ಕಳ ದೇಹದ ಬೆಳವಣಿಗೆಯಲ್ಲಿ ಮಹತ್ತರವಾದಂತಹ ಬದಲಾವಣೆಗಳು ಹೊಂದಿ ಮಕ್ಕಳು ಗೊಂದಲದಲ್ಲಿ ಇರುತ್ತಾರೆ.ಅವರವರ್ತನೆಗಳು ವಿಭಿನ್ನವಾಗಿರುತ್ತದೆ. ಇಂತಹ ಸಮಯದಲ್ಲಿ ಮಕ್ಕಳು ತಪ್ಪುದಾರಿಯನ್ನು ಹಿಡಿಯುವುದು ಸಹಜವಾಗಿರುತ್ತಾದೆ.ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಆ ಮಗು ಉತ್ತಮ ಬೆಳವಣಿಗೆಯನ್ನು ಹೊಂದಿ ದೇಶದ ಉತ್ತಮ ಪ್ರಜೆಯಾಗಿ ಬಾಳಬಹುದು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ರಮ್ಯ ಸ್ವಾಗತಿಸಿದರು. ಹರೀಶ್ ಕುಲಶೇಖರ ಧನ್ಯವಾದ ತಿಳಿಸಿದರು

