ಮಂಗಳೂರು: ಯೇನೆಪೋಯ ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಯೇನೆಪೋಯ ನರ್ಸಿಂಗ್ ಕಾಲೇಜಿನ, 15 ನೇ ಸಾಲಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಹಾಗೂ ಪ್ರತಿಜ್ನಾ ಸ್ವೀಕಾರ ಕಾರ್ಯಕ್ರಮವು ಡಿಸೆಂಬರ್ 22, 2016 ರಂದು ಯೆಂಡ್ಯುರನ್ಸ್ ವಲಯದಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಲಕ್ಷ್ಮೀ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಡಾ.ಲಾರಿಸ್ಸ ಮಾರ್ಥ ಸಾಮ್ಸ್ ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು ರೋಗಿಗಳಿಗೆ ಆರೈಕೆ ನೀಡುವ ಒಂದು ಅತ್ಯುತ್ತಮ ವ್ಯಕ್ತಿಯಾಗಬೇಕಾದರೆ ಶುಶ್ರೂಷಕರಿಗೆ ಸಂವಹನ ಕೌಶಲ್ಯದ ಅಗತ್ಯತೆಗೆ ಪ್ರಾಮುಖ್ಯತೆಯನ್ನು ನೀಡಿ ಮಾತನಾಡಿದರು. ವರ್ತನೆ, ಇಚ್ಛೆ ಮತ್ತು ಶ್ರಮ ಅವರನ್ನು ಉತ್ತಮ ಶುಶ್ರೂಷಕರನ್ನಾಗಿ ಮಾಡುತ್ತದೆ ಹಾಗೂ ಎಲ್ಲಾ ಸವಾಲುಗಳನ್ನು ಎದುರಿಸಲು ಸ್ವತಃ ಸದೃಢರಾಗಿರಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೇನೆಪೋಯ ಯುನಿವರ್ಸಿಟಿಯ ಉಪಕುಲಪತಿ ಡಾ. ಎಮ್. ವಿಜಯಕುಮಾರ್ ವಹಿಸಿ ಶುಶ್ರೂಷಣೆಯ ಮಹತ್ವ ಹಾಗೂ ವೃತ್ತಿಪರ ಜೀವನದ ಜೊತೆಗೆ ಸಮರ್ಪಣಾ ಮನೋಭಾವದ ಅಗತ್ಯತೆಯ ಕುರಿತು ಮಾತನಾಡಿದರು. ಡಾ.ಕುಮಾರ್ ಮೆನನ್, ಯೇನೆಪೋಯ ವಿಶ್ವವಿದ್ಯಾಲಯದ ಕುಲಸಚಿವರು ಭಾಗವಹಿಸಿದ್ದರು. ಡಾ ಆಶಾ ಪಿ ಶೆಟ್ಟಿ, ಪ್ರಾಂಶುಪಾಲರು ಯೇನೆಪೋಯ ನರ್ಸಿಂಗ್ ಕಾಲೇಜು, ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿನಯ ಕುಮಾರಿ ದ್ವೀಪ ಬೆಳಗಿಸುವ ಸಮಾರಂಭದ ಮಹತ್ವವನ್ನು ವಿವರಿಸಿದರು. ಸಭೆಯಲ್ಲಿ ಪ್ರೊಫೆಸರ್ ಉಮಾರಾಣಿ ಜೆ, ಮಕ್ಕಳ ಆರೋಗ್ಯ ಶುಶ್ರೂಷ ವಿಭಾಗ ಸ್ವಾಗತಿಸಿದರು. ಅಂಜು ಅಸೋಕನ್ ವಂದಿಸಿದರು. ಸುಪ್ರೀತ ಡೊಮಿನಿಕ ಲೋಬೋ ಮತ್ತು ಶೆರಿನ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.

