ಬಂಟ್ವಾಳ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 92 ನೇ ಜನ್ಮದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿಯ ವತಿಯಿಂದ ವೈದ್ಯಕೀಯ ಪ್ರಕೋಷ್ಟದ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಪೊಳಲಿಯ ಸರ್ವಮಂಗಳ ಸಭಾಭವನದಲ್ಲಿ ಈ ದಿನ ನಡೆಯಿತು. ಪಕ್ಷದ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿ ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು.

26-vp-uchita-arogya-shibira

img-20161226-wa0008

img-20161226-wa0010

img-20161226-wa0011

img-20161226-wa0012

img-20161226-wa0007

ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ.ಕೆ. ಭಟ್ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಕ್ಷೇತ್ರಾಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ನಾಯಕರಾದ ವೆಂಕಟೇಶ್ ನಾವಡ, ದೇವಪ್ಪ ಪೂಜಾರಿ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಯಶವಂತ ಪೊಳಲಿ, ಚಂದ್ರಿಕಾ, ವೈದ್ಯಕೀಯ ಪ್ರಕೋಷ್ಟದ ಡಾ.ಸುಕೇಶ್, ಡಾ. ಬಾಲಕೃಷ್ಣ, ಜಿ.ಆನಂದ, ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ, ಅಬ್ದುಲ್ ರಜಾಕ್ ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರಿನ ಪ್ರಸಿದ್ದ ತಜ್ಞ ವೈದ್ಯರುಗಳಾದ ಡಾ.ಸಂತೋಷ್ ಪೈ, ಡಾ.ಗಿರೀಶ್, ಡಾ.ಪ್ರಶಾಂತ್ ಆಚಾರ್, ಡಾ.ರವೀಂದ್ರ, ಡಾ.ಗಣೇಶ್ ಕಾಮತ್, ಡಾ.ಅಶ್ವಿನ್ ಬಾಳಿಗಾ ಪಾಲ್ಗೊಡಿದ್ದರು. ಒಟ್ಟು 129 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

By suddi9

Leave a Reply

Your email address will not be published. Required fields are marked *