ಪೆರ್ಮನ್ನೂರು ಸಂತ ಸಬೆಸ್ಟಿಯನ್ ಧರ್ಮಕೇಂದ್ರದ ನೇತೃತ್ವದಲ್ಲಿ ಪೊಸಕುರಲ್ ಬಳಗದ ಸಹಕಾರದಲ್ಲಿ, ಸೌಹಾರ್ದ ಕ್ರೀಸ್ಮಸ್ ಸಂಗಮ ಕಾರ್ಯಕ್ರಮವನ್ನು ತೊಕ್ಕೊಟ್ಟು ಒಳಪೇಂಟೆ ಅಂಬೇಡ್ಕರ್ ಮೈದಾನದಲ್ಲಿ ಗುರುವಾರ ಸಂಜೆ ನಡೆಸಲಾಯಿತು.
ಪೆರ್ಮನ್ನೂರು ಸಂತ ಸಬೆಸ್ಟಿಯನ್ ಧರ್ಮಕೇಂದ್ರದ ನೇತೃತ್ವದಲ್ಲಿ ಪೊಸಕುರಲ್ ಬಳಗದ ಸಹಕಾರದಲ್ಲಿ ಸೌಹಾರ್ದ ಕ್ರೀಸ್ಮಸ್ ಸಂಗಮ ಕಾರ್ಯಕ್ರಮವನ್ನು ತೊಕ್ಕೊಟ್ಟು ಒಳಪೇಟೆ ಅಂಬೇಡ್ಕರ್ ಮೈದಾನದಲ್ಲಿ ಗುರುವಾರ ಸಂಜೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಧಾನ ಭಾಷಣ ಮಾಡಿದ ಪ್ರಾಧ್ಯಾಪಕರು ಹಾಗೂ ಖ್ಯಾತ ಯಕ್ಷಗಾನ ಅರ್ಥಧಾರಿಗಳು, ಸಾಹಿತಿ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿಯರು “ದೊಡ್ಡ ದೊಡ್ಡ ಸುದ್ದಿವಾಹಿನಿಗಳು ಕೇವಲ ವಿಶೇಷ ಸುದ್ದಿಗಳನ್ನು ಪ್ರಸಾರ ಮಾಡಲೆಂದು ಕಾಯುತ್ತಿರುತ್ತವೆ, ಆದರೆ ಪೊಸಕುರಲ್ ಸುದ್ದಿವಾಹಿನಿ ಸರ್ವಧರ್ಮದವರನ್ನು ಸೇರಿಸಿಕೊಂಡು ಸಾಮರಸ್ಯದ ಕಾರ್ಯಕ್ರಮವನ್ನು ಸಡೆಸಿಕೊಂಡು ಬರುವುದು ಶ್ಲಾಘನೀಯ ಎಂದು ತಿಳಿಸಿದರು”.
ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರು, ದರ್ಗಾ ಸಮಿತಿಯ ಸದಸ್ಯರು ಹಾಗೂ ನಗರಸಭೆ ಸದಸ್ಯರಾದ ಶ್ರೀ ಫಾರೂಕ್ ಉಳ್ಳಾಲ್ ಮಾತನಾಡಿ, “ಇವತ್ತಿಗೂ ಭಾರತ ವಿಶ್ವದಲ್ಲಿ ಎತ್ತರದ ಸ್ಥಾನದಲ್ಲಿರಲು ಈ ನೆಲದ ಭಾವೈಕ್ಯತೆ ಮತ್ತು ಸಾಮರಸ್ಯ ಕಾರಣ ಇನ್ನೂ ಕೂಡ ನಾವು ಸಾಮರಸ್ಯದಲ್ಲಿ ಬದುಕಬೇಕೆಂದು ತಿಳಿಸಿದರು”.


ಸಂತ ಸಬೆಸ್ಟಿಯನ್ ಧರ್ಮಕೇಂದ್ರದ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀ ಡೆಮೆಟ್ರಿಯಸ್ ಡಿ’ಸೋಜ ಮಾತನಾಡಿ “ಏಸು ಕ್ರಿಸ್ತರ ಸಂದೇಶ, ಸಾರ್ವಕಾಲಿಕ ಸತ್ಯವನ್ನು ತಿಳಿಹೇಳುತ್ತದೆ. ತನ್ನ ಧರ್ಮವನ್ನು ಪ್ರೀತಿಸಿ, ಇತರ ಧವಿiರ್Áಯರ ಭಾವನೆಗಳನ್ನು ಗೌರವಿಸುವುದು ಕೂಡ ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಸಂತ ಸಬೆಸ್ಟಿಯನ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳು
ವಂ/ಫಾ/ಡಾ. ಜೆ.ಬಿ.ಸಲ್ದಾನ “ಉಳ್ಳಾಲ ಪ್ರದೇಶದಲ್ಲಿ ಈ ರೀತಿಯ ಸೌಹಾರ್ದ ಕೂಟ ನಡೆಯುತ್ತಿದ್ದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವುದಿಲ್ಲವೆಂದು” ಆಶೀರ್ವಚನ ನೀಡಿದರು.
ಕುಡ್ಲ ತಾಲೂಕು ಪಂಚಾಯತ್ ಅಧ್ಯಕ್ಷರು ಶ್ರೀ ಮಹಮ್ಮದ್ ಮೋನು, ಜಿಲ್ಲಾಧಾರ್ಮಿಕ ಪರಿಷತ್ ಸದಸ್ಯರು ಶ್ರೀ ಕೃಷ್ಣಗಟ್ಟಿ ಅಡ್ಕ”.ಉಳ್ಳಾಲ ಸದ್ಭಾವನಾ ವೇದಿಕೆಯ ಅಧ್ಯಕ್ಷರು ಶ್ರೀ ಪ್ರಸಾದ್ ರೈ ಕಲ್ಲಿಮಾರ್, ಕೊಂಕಣಿ ಚಲನಚಿತ್ರದ ನಿರ್ಮಾಪಕರು ಶ್ರೀ ವಿನ್ಸೆಂಟ್ಡಿ’ಸೋಜ,”ಸಂತ ಸಬೆಸ್ಟಿಯನ್ ಕಾಲೇಜಿನ ಪ್ರಾಂಶುಪಾಲರು ವಂ/ಫಾ/ ಎಡ್ವಿನ್ ಮಸ್ಕರೇನಸ್, ಪೊಸಕುರಲ್ ಬಳಗದ ಸಾಂಸ್ಕ್ರತಿಕ ಸಂಚಾಲಕರು ಶ್ರೀ ವಿನ್ಸೆಂಟ್ ನಝರತ್, ಪೊಸಕುರಲ್ ಬಳಗ ಮಹಿಳಾ ವಿಭಾಗದ ಅಧ್ಯಕ್ಷರು ಶ್ರೀಮತಿ ಸುಹಾಸಿನಿ ಬಬ್ಬುಕಟ್ಟೆ ಉಪಸ್ಥಿತರಿದ್ದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು ಶ್ರೀ ಲೂಕಸ್ ಡಿ’ಸೋಜ ಸ್ವಾಗತಿಸಿದರು.ಪೊಸಕುರಲ್ ಬಳಗದ ನಿರ್ದೇಶಕರು ಶ್ರೀ ವಿದ್ಯಾಧರ್ ಶೆಟ್ಟಿ ಪ್ರಸ್ತಾವನೆಯ ಮಾತು ಹೇಳಿದರು. ವಂ/ಫಾ/ ಪ್ರವೀಣ್ ಜಾಯ್ ಸಲ್ದಾನ ವಂದನೆಯನ್ನು ಸಮರ್ಪಿಸಿದರು.
ಸಭಾ ಕಾರ್ಯಕ್ರಮದ ನಂತರ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.




