ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಮಾರ್ಚ್ 11 ಮತ್ತು 12, 2017 ರಂದು ಜರುಗಲಿರುವ 13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ ಚಲನಚಿತ್ರ ಸಾಹಿತಿ ಹಾಗೂ ಜನಪದ ತಜ್ಞ ಡಾ. ಹಂಸಲೇಖ ಅವರಿಗೆ ಅವರ ಬೆಂಗಳೂರಿನ ನಿವಾಸದಲ್ಲಿ ಅಧಿಕೃತ ಆಮಂತ್ರಣ ನೀಡಲಾಯಿತು.

hamsalekha

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ, ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್, ಸಮಾಜ ಸೇವಕ ಡಾ. ರಾಮರೆಡ್ಡಿ, ಆಸ್ಟ್ರೇಲಿಯಾ ಯುನೈಟೆಡ್ ಕನ್ನಡ ಸಂಘದ ಕೋಶಾಧಿಕಾರಿ ಸುರೇಶ್ ಗೌಡ, ಮಾಲ್ಡಿವ್ಸ್ ಕನ್ನಡ ಸಂಘದ ಕಾರ್ಯದರ್ಶಿ ಎಂ. ಬಸವರಾಜ್, ಜನಪದ ಗಾಯಕ ಗೊ.ನಾ. ಸ್ವಾಮಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *