ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮತ್ತು ಈಗಾಗಲೆ ಕಡಬಕ್ಕೆ ವರ್ಗಾವಣೆಯಾಗಲಿರುವ ಪ್ರಕಾಶ್ ದೇವಾಡಿಗ ಇವರು ಪುಣಚ ಗ್ರಾಮದ ಮೂಡಂಬೈಲು ಪರಿಶಿಷ್ಟರ ಕಾಲನಿಯ ಶಂಕರ ಮೂಡಂಬೈಲು ಇವರ ಮನೆಯಲ್ಲಿ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರ ಉಪಸ್ಥಿತಿಯಲ್ಲಿ ಪರಿಶಿಷ್ಟರೇ ಮಾಡಿರುವ ಬೋಜನ ಸೇವಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂಧಿ ಪ್ರವೀಣ್ ರೈ, ಸಂಘಟನೆಯ ಸಂಚಾಲಕ ಗೋಪಾಲ್ ನೇರಳಕಟ್ಟೆ, ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಕಲಾ ಸಂಘದ ಅಧ್ಯಕ್ಷ ಮೋಹನ್ದಾಸ್ ಯು ವಿಟ್ಲ, ಪುಣಚ ಗ್ರಾಮ ಶಾಖೆಯ ಮಾಜಿ ಆದ್ಯಕ್ಷ ಕುಶಾಲಪ್ಪ ಮೂಡಂಬೈಲು, ರವಿ, ಸುಂದರ, ಈಶ್ವರ ಮತ್ತು ಕಾಲನಿಯ ಇತರರು ಉಪಸ್ಥಿತರಿದ್ದರು.

