ಬಂಟ್ವಾಳ : ಗೋಪಾಲ್ ಕೃಷ್ಣ ಸೇವಾ ವಿಶ್ವಸ್ಥ ಮಂಡಳಿಯ ಕನಕಗಿರಿಯ ವಾರ್ಷಿಕೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಧಾರ್ಮಿಕ ಮುಖಂಡರಾದ ಕೈಯೂರು ನಾರಾಯಣ ಭಟ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ತಿರುಮಲೇಶ್, ಸೀತಾರಾಮ ಶೆಟ್ಟಿ, ಲಕ್ಷ್ಮಣ ಮಂಚಿ, ದಿವಾಕರ ಶೆಟ್ಟಿ, ಶ್ರೀದೇವಿ ಕೈಯೂರು, ಜಯಂತಿ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ಜ. 04 ರಿಂದ 09 ರವರೆಗೆ ವಿವಿಧ ಕಾರ್ಯಕ್ರಮಗಳು ಜರಗಲಿವೆ.

