ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ತಾ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ , ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ , ಬಂಟ್ವಾಳ ಪತ್ರಕರ್ತರ ಸಂಘ, ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಮಂಚಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಸಭಾಂಗಣದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀ ಶರಾದ ಆರ್. ಮಹೇಶ್ ಉದ್ಘಾಟಿಸಿದರು.

low-2

ಸಂಪನ್ಮೂಲ ವ್ಯಕ್ತಿ ಹಿರಿಯ ವಕೀಲರಾದ ಪುಂಡಿಕಾೈ ನಾರಾಯಣ ಭಟ್ ಹಿಂದೂ ಉತ್ತರಾಧಿಕಾರಿ ಶಾಸನ ಹಾಗೂ ಮಹಿಳೆಯರ ಹಕ್ಕಿನ ಬಗ್ಗೆ ಮಾಹಿತಿ ನೀಡಿದರು. ಮಂಚಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಬಿ.ಉಮ್ಮರ್ ಅಧ್ಯಕ್ಷತೆ ವಹಿಸಿದ್ದರು.

low-1

ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ, ಸಹಾಯಕ ಸರಕಾರಿ ಅಭಿಯೋಜಕ ಎಂ.ಎಸ್.ಆಲಿ, ಸಹಾಯಕ ಸರಕಾರಿ ವಕೀಲ ಸತೀಶ್ ಕುಮಾರ್ ಶಿವಗಿರಿ , ತಾ.ಪಂ.ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಆಚಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರ ವೀಂದ್ರ ಶೆಟ್ಟಿ, ವಕೀಲರು ಗಳಾದ ಕಜೆ ರಾಮಚಂದ್ರ ಭಟ್, ಪ್ರಕಾಶ್‍ನಾರಾಯಣ ಜೆ., ಸತೀಶ್ .ಬಿ., ರಾಜಾರಾಮ ನಾಯಕ್, ಆಶಾಪ್ರಸಾದ್ ರೈ, ವಿನೋದ, ಆಶಾಮಣಿ, ಎಸ್.ಕೆ.ಪಿ.ಎ.ವಲಯಾಧ್ಯಕ್ಷ ಸುಕುಮಾರ್‍ಉಪಸ್ಥಿತರಿದ್ದರು. ನ್ಯಾಯವಾದಿ ಮೋಹನ್ ಪ್ರಭು ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸುಧಾ ಜೋಷಿ ವಂದಿಸಿದರು. ನ್ಯಾಯವಾದಿ ರ ವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *