ಕೈಕಂಬ: ಮಳಲಿ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಶ್ರೀ ಕ್ಷೇತ್ರದ ಕಾರ್ತಿಕ ಮಾಸದ ವಿಶೇಷತೆಯಂದು ಮಂಗಳೂರು ಮೇಯರ್ ಹರಿನಾಥ್ ಅವರು ದೇವಳಕ್ಕೆ ಸೋಮವಾರದಂದು ಭೇಟಿ ನೀಡಿದರು. ಸತೀಶ್ ಕುಮಾರ್, ವಾಸುದೇವ ಕದ್ರಿ, ಕೇಶವ ಪುರುಷ ಅವರೊಂದಿಗೆ ಇದ್ದರು. ದೇವಳದ ಪ್ರಧಾನ ಅರ್ಚಕ ಹಾಗೂ ಅಧ್ಯಕ್ಷ ಉಮೇಶ್ ನಾಥ್ ಕದ್ರಿ ಹಾಗೂ ದೇವಳದ ಮುಕ್ತೇಸರ ಗಂಗಾಧರ ಜೋಗಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಹರೀಶ್ ಮಟ್ಟಿ, ಕೋಶಾಧಿಕಾರಿ ದಿನೇಶ್ ಶೆಟ್ಟಿ, ಶೇಖರ ಜೋಗಿ ಕಿನ್ನಿಕಂಬಳ, ಜಯರಾಮ್ ಆಳ್ವ, ನಾಗೇಶ್ ಜೋಗಿ, ಚಂದ್ರಹಾಸ ಜೋಗಿ, ವಿಶ್ವನಾಥ ಪೂಜಾರಿ ಮಟ್ಟಿ, ಉಮಾಶಂಕರ ಸುಲಾಯ, ಹರೀಶ್ ಕೊಲಂಬೆ ಉಪಸ್ಥಿತರಿದ್ದರು.


