ಮೂಡುಬಿದಿರೆ: ಶೇಂದಿ ತೆಗೆಯಲು ಮರ ಹತ್ತಿದ ವ್ಯಕ್ತಿಯೊಬ್ಬ ಅಕಸ್ಮಾತ್ ಜಾರಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಕೆಲ್ಲಪುತ್ತಿಗೆ ಸರ್ಕಾರಿ ಶಾಲೆ ಬಳಿಯ ಆಶಾ ನಿವಾಸಿ ಸುಂದರ ಪೂಜಾರಿ(65)ಎಂದು ತಿಳಿದುಬಂದಿದೆ. ಸುಂದರ ಪೂಜಾರಿ ಶುಕ್ರವಾರ ಸಂಜೆ ಶೇಂದಿ ತೆಗೆಯಲು ತನ್ನ ಮನೆ ಹತ್ತಿರದಲ್ಲಿರುವ ತೆಂಗಿನ ಮರಕ್ಕೆ ಹತ್ತಿದ್ದರು. ಶೇಂದಿ ತೆಗೆಯುವಾಗ ಅಕಸ್ಮಾತ್ ಜಾರಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತರ ಪುತ್ರ ಸುಜಿತ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

