ಬಂಟ್ವಾಳ: ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ವಿಎಸ್ ಮಹಾವಿದ್ಯಾಲಯ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಗುರುವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಅನಂತ ಪದ್ಮನಾಭ ರಾವ್ ‘ನೀರಿಂಗಿಸುವಿಕೆ’ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ, ಗ್ರಾಮ ಪಂಚಾಯಿತಿ ಸದಸ್ಯ ರಾಘವ ಅಮೀನ್, ಮಾಜಿ ಸದಸ್ಯ ಕೃಷ್ಣಪ್ಪ ಪೂಜಾರಿ, ಉಪನ್ಯಾಸಕಿ ರೂಪಾ ಹರೀಶ ಆಚಾರ್ಯ, ಉದ್ಯಮಿ ಜೆರಾಲ್ಡ್ ಡಿಕೋಸ್ತ, ಶರತ್ ಕುಮಾರ್, ರವೀಂದ್ರ ಪೂಜಾರಿ ಕೈತ್ರೋಡಿ, ಕೃಷಿಕ ವಿಶ್ವನಾಥ ಗೌಡ, ಯೋಜನಾಧಿಕಾರಿ ಪೊ.ನಾರಾಯಣ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

