ಕೈಕಂಬ: ಪ್ರಜಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಕೆ.ಕೆ ಎಸ್ ಯೋಜನೆಯಡಿಯಲ್ಲಿ, ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಕೈಕಂಬ ವಲಯ ಇದರ ಸದಸ್ಯೆಯರಿಗೆ ಸಾಂಸ್ಕೃತಿಕ ಸ್ಪರ್ಧಾ ಕೂಟವನ್ನು ವಲಯ ಒಕ್ಕೂಟ ಸಭೆಯೊಂದಿಗೆ ಕುಪ್ಪೆಪದವು ಆಶಾಕಿರಣ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಜನಾ ಸಂಯೋಜಕರಾದ ವಿಲಿಯಂ ಸಾಮ್ಯುವೆಲ್ ರವರು ಉಪಸ್ಥಿತರಿದ್ದು, ಸದಸ್ಯೆಯರಿಗೆ ಸ್ಪರ್ಧೆಯಲ್ಲಿ ಭಗವಹಿಸಲು ಹುರಿದುಂಬಿಸಿದರು. ಸ್ಪರ್ಧೆಯಲ್ಲಿ ಜನಪದ ಹಾಡು, ಜಾಗೃತಿ ಮೂಡಿಸುವ ಹಾಡು, ಭಾಷಣ, ರಂಗೋಲಿ, ಭಿತ್ತಿ ಚಿತ್ರ ಹಾಗೂ ಶಿಶು ಪ್ರಹಸನ ಒಳಗೊಂಡಿದ್ದು, ಸದಸ್ಯೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಈ ಸಂದರ್ಭ ಮಾಜಿ ಪಂ. ಸದಸ್ಯ ದಾಮೋದರ ಮೇಂಡ, ಹಾಗೂ ನಿವೃತ್ತ ಶಿಕ್ಷಕಿ ಪದ್ಮಾವತಿ, ಸಂಸ್ಥೆಯು ಮಹಿಳೆಯರಿಗೆ ನೀಡುತ್ತಿರುವ ಅವಕಾಶಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಮೇಲ್ವೀಚಾರಣೆಯನ್ನು ವಲಯ ಸಂಯೋಜಕ ಈಶ್ವರ್ ನಾಯ್ಕ್, ಕಾರ್ಯಕರ್ತೆಯರಾದ ಪಾಲಾಕ್ಷಿ ಹಾಗೂ ಸೀತಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ಝರೀನಾ ಸ್ವಾಗತಿಸಿ, ಸವಿತ ಧನ್ಯವಾದ ಸಮರ್ಪಿಸಿದರು.

