ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ.ವಿನಯ್ ಆಳ್ವ ಸ್ವರಾಜ್ಯ ಮೈದಾನದಲ್ಲಿ ಉದ್ಘಾಟಿಸಿದರು.
ರೋಟರಿ ಸಂಸ್ಥೆಯ ಕೋಶಾಧಿಕಾರಿ ಅನಂತಕೃಷ್ಣ ರಾವ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದರು. ರೋಟರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ, ಆಡಳಿತಾಧಿಕಾರಿ ಶುಭಕರ್ ಅಂಚನ್, ಸಂಸ್ಥೆಯ ವಿವಿಧ ವಿಭಾಗದ ಸಂಯೋಜಕರು, ಎಲ್ಲಾ ಭೋದಕ-ಭೋದಕೇತರ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕಿ ರೋಷನಿ ವಿ.ಎಸ್ ನಿರೂಪಿಸಿದರು. ಉಪನ್ಯಾಸಕಿ ವೈಶಾಲಿ ವಂದಿಸಿದರು.

