ವಿಟ್ಲ ಖಾಸಗಿ ಬಸ್ ನೌಕರರ ಸಂಘದ ವತಿಯಿಂದ ವಿಟ್ಲ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷ ಅರುಣ್ ಎಂ ವಿಟ್ಲ ಇವರನ್ನು ವಿಟ್ಲದ ಮಾದರಿ ಶಾಲೆಯ ಶತಮಾನೋತ್ತರ ಸಭಾ ಭವನದಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ವಿಟ್ಲ ಪೋಲಿಸ್ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಉದ್ಘಾಟಿಸಿದರು. ನೋಟರಿ ವಕೀಲ ಜಯರಾಮ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸತೀಶ್ ಕಲ್ಲೆಗ, ಸಂಘದ ಅಧ್ಯಕ್ಷ ದನಂಜಯ ಕಾಶಿಮಠ, ಮಾಜಿ ಅಧ್ಯಕ್ಷರುಗಳಾದ ಪ್ರವೀಣ್ ಕುಮಾರ್, ಸತೀಶ ಮಂಗಲಪದವು, ಹಮೀದ್, ಕೇಶವ ಬಸ್ ಏಜೆಂಟ್ ಭಾಗವಹಿಸಿದ್ದರು. ಕೆ ನಾರಾಯಣ ಕಾರ್ರಕ್ರಮ ನಿರ್ವಹಿಸಿದರು. ಸಂಘದ ಎಲ್ಲಾ ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

1

By suddi9

Leave a Reply

Your email address will not be published. Required fields are marked *