ಮೂಡುಬಿದಿರೆ: ನಾನು ಕಾಂಗ್ರೆಸ್ ಪಕ್ಷಕ್ಕೆ 11 ತಿಂಗಳ ಹಿಂದೆಯೇ ರಾಜಿನಾಮೆ ನೀಡಿದ್ದೇವೆ. ಆದರೆ ಕೆಪಿಸಿಸಿ ಅಧ್ಯಕ್ಷರು ಅದನ್ನು ಅಂಗೀಕರಿಸಿಲ್ಲ. ನನ್ನನ್ನು ಉಚ್ಛಾಟನೆ ಮಾಡಲು ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸದಸ್ಯತನ ನೋಂದಣಿಯೇ ಆಗಿಲ್ಲ. ನನ್ನನ್ನು ಉಚ್ಛಾಟಿಸುವ ನೈತಿಕ ಹಕ್ಕು ಸ್ಥಳೀಯ ಶಾಸಕರಿಗಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಳೆದ 40 ವರ್ಷಗಳಿಂದ ನಾನು ಮತ್ತು ನನ್ನ ಬೆಂಬಲಿಗರು ರಾಜಕೀಯದಲ್ಲಿ ದುಡಿಯುತ್ತಿದ್ದೇವೆ. 1999ರ ಚುನಾವಣೆಯ ಸಂಧರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಭಯಚಂದ್ರರ ಪರಿಚಯ ಕ್ಷೇತ್ರದಲ್ಲಿರಲಿಲ್ಲ. ಅವರನ್ನು ಹಳ್ಳಿ ಹಳ್ಳಿಗೆ ಕರೆದುಕೊಂಡು ಹೋಗಿ ಜನರಿಗೆ ಪರಿಚಯಿಸಿ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಅವರನ್ನು ಗೆಲ್ಲಿಸಿದೆವು. ಮೂಡುಬಿದಿರೆ ತಾಲೂಕಾಗಬೇಕು. ಒಳಚರಂಡಿ ಯೋಜನೆ ಕಾರ್ಯರೂಪಕ್ಕೆ ತರಬೇಕು. ಮೂಲ್ಕಿ ಮತ್ತು ಮೂಡುಬಿದಿರೆಯಲ್ಲಿ ಸರಕಾರಿ ಕಾಲೇಜು ಸ್ಥಾಪಿಸಬೇಕು. ಮೂಡುಬಿದಿರೆಗೆ ಸುಸಜ್ಜಿತ ಮಾರ್ಕೆಟ್ ನಿರ್ಮಿಸಬೇಕು. ಎಂಬ ಬೇಡಿಕೆಯನ್ನು ಸಲ್ಲಿಸಿದ್ದು ನಾಲ್ಕು ಅವಧಿಗೆ ಅವರೇ ಶಾಸಕರಾಗಿದ್ದರೂ ಈ ಬೇಡಿಕೆಗಳು ಇನ್ನೂ ಈಡೇರಿಲ್ಲ.

ರಾಜಕೀಯವನ್ನು ವ್ಯಾಪಾರೀಕರಣ ಮಾಡುದರಲ್ಲೇ ಕಾಲಹರಣ ಮಾಡುತ್ತಿರುವ ಶಾಸಕರು ಬಡಜನರಲ್ಲಿ ತಮ್ಮ ದರ್ಪವನ್ನು ತೋರಿಸಿ ಕಾರ್ಯಕರ್ತರನ್ನು ಬೆದರಿಸಿ ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡದೆ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಶಕ್ತರಾಗಿದ್ದಾರೆ. ಅವರನ್ನು 4 ಬಾರೀ ಗೆಲ್ಲಿಸಲು ಕಾರಣರಾದ ಬಹುಸಂಖ್ಯೆಯ ಜಾತಿ ಸಮುದಾಯದ ಒಬ್ಬರಗೊಬ್ಬರನ್ನು ಎತ್ತಿ ಕಟ್ಟಿ ರಾಜಕೀಯ ಚದುರಂಗ ಆಟವಾಡುತ್ತಿದ್ದಾರೆ. ಇವರು ಶಾಸಕರಾದ ಬಳಿಕವೇ ಕ್ಷೇತ್ರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗಿದೆ. ಮೂಲ್ಕಿ ವಲಯದಲ್ಲಿ ಒಬ್ಬ ಬಂಟ, ಇಬ್ಬರು ಬಲ್ಲವರ ಕೊಲೆಯಾಯಿತು. ಕಳೆದ ವರ್ಷ ಮೂಡುಬಿದಿರೆಯಲ್ಲಿ ಯುವ ಬಿಲ್ಲವನ ಕೊಲೆಯಾಯಿತು.

ಈ ಸಂಧರ್ಭದಲ್ಲಿ ನಡೆದ ಗಲಭೆಯಲ್ಲಿ ಮೂಲ್ಕಿಯಲ್ಲಿ ಎರಡು ಅಂಗಡಿಗಳು, ಮೂಡುಬಿದಿರೆಯಲ್ಲಿ ಆರು ಮುಸ್ಲಿಂ ಸಮುದಾಯದ ಮತ್ತು ಎರಡು ಅನ್ಯ ಕೋಮಿನ ಅಂಗಡಿಗಳಿಗೆ ಹಾನಿಯಾಗಿತ್ತು ಈ ಸಂತೃಸ್ಥರಿಗೆ ಸಾಂತ್ವಾನ ಹೇಳುವ ಕೆಲಸವನ್ನು ಶಾಸಕರು ಮಾಡಿಲ್ಲ. ಈ ಎಲ್ಲಾ ಸಂಧರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ಮತ್ತು ಇತರ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ನ್ಯಾಯ ದೊರಕದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನನಗೆ ರಾಜಕೀಯ ಉದ್ಯೋಗ ಅಲ್ಲ. ಉದ್ಯಮಿಯಾಗಿ ಬಂದ ಆದಾಯದಿಂದ ರಾಜಕೀಯರ ಕೆಲಸ ಮಾಡುತ್ತಿದ್ದೇನೆ. ಬಡ ಕಾರ್ಯಕರ್ತರನ್ನು ಕಟ್ಟಿಕೊಂಡು ಪಕ್ಷವನ್ನು ಬೆಳೆಸಿದ್ದೇನೆ. ಕಳೆದ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ನಾನು ಮತ್ತು ನನ್ನ ಬೆಂಬಲಿಗರು ತಟಸ್ಥ ಧೋರಣೆ ತಳೆದುದರಿಂದ ಕಾಂಗ್ರೆಸ್ ಪಕ್ಷವು ಐದು ಜಿ.ಪಂ ಮತ್ತು ಹದಿನೈದು ತಾ.ಪಂ ಶೀಟುಗಳನ್ನು ಕಳೆದುಕೊಂಡಿದೆ. ಈ ಕ್ಷೇತ್ರದ ಜನರು ನನಗೆ ರಾಜಕೀಯ ಕ್ಷೇತ್ರದಲ್ಲಿ ಎಲ್ಲಿಯವರೆಗೆ ಆಶೀರ್ವಾದ ಮಾಡುತ್ತಾರೆಯೋ ಅಲ್ಲಿಯವರೆಗೆ ರಾಜಕೀಯದಲ್ಲಿ ದುಡಿಯುತ್ತೇನೆ ಎಂದರು.

ಹರೀಶ್ ಶೆಟ್ಟಿ ಮಜಲೋಡಿ, ಫಯಾಝ್ ಅಲಂಗಾರ್, ಉಮಾನಾಥ ಭಂಡಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *