ಉಡುಪಿ: ಸಿಟಿ ಜೇಸಿಐ ಆತಿಥ್ಯದಲ್ಲಿ ಚಿಟ್ಪಾಡಿಯ ಯು ಎಸ್ ನಾಯಕ್ ಸಭಾಭವನದಲ್ಲಿ ನಡೆದ ಜೇಸಿಐ ಇಂಡಿಯಾ ವಲಯ 15ರ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ ಸಮ್ಮೇಲನ 2016 ರಲ್ಲಿ ವಿಟ್ಲ ಜೇಸಿಐ ಘಟಕವು ವಲಯದಿಂದ ನೀಡುವ ಪ್ರಶಸ್ತಿಗಳಲ್ಲಿ ಹೆಚ್ಚಿನ ಎಲ್ಲಾ ಪ್ರಶಸ್ತಿಗಳನ್ನು ಪಡೆದಿರುತ್ತದೆ. ಘಟಕದ ಅಧ್ಯಕ್ಷ ಜೇಸಿ ಸೆನೆಟರ್ ಬಾಬು ಕೆ ವಿ ಯವರು ವಲಯದ ಒಟ್ಟು 88 ಘಟಕಗಳಲ್ಲಿ ಅತ್ಯುತ್ತಮ್ಮ ಘಟಕಾಧ್ಯಕ್ಷ ಔಟ್ ಸ್ಟಾಂಡಿಂಗ್ ಲೋಮ್ ಪ್ರೆಸಿಡೆಂಟ್ ಆಫ್ ಝೋನ್ 2016 ಪ್ರಶಸ್ತಿ ಪಡೆದಿರುತ್ತಾರೆ. ಘಟಕದ ಕಾರ್ಯದರ್ಶಿ ಜೆಎಫ್ಡಿ ಲೂವಿಸ್ ಮಸ್ಕರೇನಸ್ ಔಟ್ಸ್ಟಾಂಡಿಂಗ್ ಲೋಕಲ್ ಆರ್ಗನೈಸೇಶನ್ ಓಫ್ ದ ಝೋನ್ ವಿನ್ನರ್ ಪ್ರಶಸ್ತಿ ಪಡೆದಿರುತ್ತಾರೆ.
ರಾಷ್ಟ್ರೀಯ ನಾಯಕಿ ಜೇಸಿ ಸೆನೆಟರ್ ರಾಜಶ್ರೀ ಭಜೆಯವರ ಈ ವರ್ಷದ ಯೋಜನೆ ನೇಷನಲ್ ಫ್ಲಾಗ್ಶಿಪ್ ಸುರಕ್ಷಾ ಪ್ರೋಜೆಕ್ಟ್ ಬರ್ನಿಂಗ್ ಮೆಶಿನ್ ಕಾರ್ಯಕ್ರಮದಲ್ಲಿ ವಿಟ್ಲದ ಶಾಲೆಗಳಿಗೆ ಬರ್ನಿಂಗ್ ಮೆಶಿನ್ಗಳನ್ನು ನೀಡಿರುವುದಕ್ಕೆ ವಲಯದಲ್ಲಿ ಪ್ರಥಮ ಸ್ಥಾನ ವಿಟ್ಲ ಜೇಸಿಐ ಪಡೆಯಿತು. ಜೇಸಿ ಸಪ್ತಾಹದಲ್ಲಿ ನಡೆಸಿದ ಕಾರ್ಯಕ್ರಮಗಳಿಗೆ ಪ್ರಥಮ ಸ್ಥಾನ, ಅಲ್ಲದೆ ಔಟ್ಸ್ಟಾಂಡಿಂಗ್ ಲೋಕಲ್ ಕಮ್ಯುನಿಟಿ ಡೆವೆಲಿಪ್ಮೆಂಟ್ ವಿನ್ನರ್ ಅವಾರ್ಡ್, ಔಟ್ಸ್ಟಾಂಡಿಂಗ್ ಗ್ರೋತ್ & ದೆವೆಲೊಪ್ಮೆಂಟ್ ವಿನ್ನರ್ ಅವಾರ್ಡ್, ನ್ಯೂ ಲೇಡಿ ಲೋಮ್ ರೆಕೊಗ್ನೈಶೇಷನ್ ಅವಾರ್ಡ್, ಸುಪ್ರಿಮ್ ಲೋಮ್ ಅವಾರ್ಡ್, ಟೋಪ್ ಲೋಮ್ಸ್ ಇನ್ ಟ್ರೈನಿಂಗ್ ಏರಿಯಾ 2016 ಅವಾರ್ಡ್, ಟ್ರೈನಿಂಗ್ ವೀಕ್ ಅವಾರ್ಡ್ 2016, ಪ್ರೋಗ್ರಾಮ್ ಏರಿಯಾ ರೆಕೊಗ್ನೈಶೇಷನ್ ಅವಾರ್ಡ್, ಪ್ಲಾಟಿನಮ್ ಲೋಮ್ ಆಫ್ ದ ಝೋನ್ 2016 ಈಯರ್ ಅವಾರ್ಡ್, ಮೀಡಿಯಾ ಕವರೇಜ್ ರೆಕೊಗ್ನೈಶೇಷನ್ ಅವಾರ್ಡ್ ಹಾಗೂ ಸ್ಪೆಶಲ್ ರೆಕೊಗ್ನೈಶೇಷನ್ ಅವಾರ್ಡ್ ಸೇರಿ ಒಟ್ಟು 19 ಪ್ರಶಸ್ತಿಗಳನ್ನು ಪಡೆಯಿತು.
ಈ ಕಾರ್ಯಕ್ರಮದಲ್ಲಿ ನಡೆಸಿದ ಘಟಕ ವೈಭವ ವಿಭಾಗದಲ್ಲಿ ವಿಟ್ಲ ಜೇಸಿಐ ಯ ಶೃತಿ ಶೆಟ್ಟಿ ಮತ್ತು ರಮೇಶ್ ಬಿ ಕೆ ನೇತೃತ್ವದಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗದು ಮತ್ತು ಪ್ರಶಸ್ತಿ ಯೊಂದಿಗೆ ವಲಯದಲ್ಲಿ ಪ್ರಥಮ ಸ್ಥಾನ ಪಡೆಯಿತು. ವಿಟ್ಲ ಜೇಸಿಐಯ ನಿಕಟ ಪೂರ್ವ ಅಧ್ಯಕ್ಷ ವಲಯ ತರಬೇತಿ ವಿಭಾಗದ ನಿರ್ದೇಶಕ ಮೋಹನ ಮೈರ ವಲಯ 15ರ 2017 ನೇ ಸಾಲಿಗೆ ವಲಯ ಉಪಾಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಚುನಾಯಿತರಾದರು. ಈ ವಲಯ ಸಮ್ಮೇಲನದಲ್ಲಿ ಜೇಸಿಐ ಇಂಡಿಯಾದ ನಾಯಕರು, ವಲಯ 15ರ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಪೂರ್ವಾಧ್ಯಕ್ಷರುಗಳು ಹಾಗೂ ಎಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.

