ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದು ಮುಖ್ಯ ಅತಿಥಿಯಾಗಿ ಶಾಲಾ ಸಲಹಾ ಸಮಿತಿಯ ಗೌರವ ಸಲಹೆಗಾರರಾದ ಶ್ರೀಯುತ ಸುದರ್ಶನ್ ಪಡಿಯಾರ್ ಇವರು ತಮ್ಮ ದಿವ್ಯ ಹಸ್ತದಿಂದ ಧ್ವಜವನ್ನು ಆರಳಿಸಿ ಕನ್ನಡ ಅಭಿಮಾನದ ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

rita-school

ಕಾರ್ಯಕ್ರಮದ ವೇದಿಕೆಯು ಲಯನ್ಸ್ ವಿಟ್ಲ ಕಾರ್ಯದರ್ಶಿ ಮೋಹನ್ ಬಿ. ಹಾಗೂ ಜಂಟಿ ಶಾಲಾ ಮುಖ್ಯಸ್ಥರಿಂದ ಕಂಗೊಳಿಸುತ್ತಿದ್ದು ವಿದ್ಯಾರ್ಥಿಗಳ ಹಾಡು ಭಾಷಣವು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿತು. ಈ ಒಂದು ಶುಭ ಕಾರ್ಯಕ್ರಮವನ್ನು ಕುಮಾರಿ ಹರ್ಷಿತಾ ಇವರು ನಿರೂಪಿಸಿದ್ದು, ಕುಮಾರಿ ರೈಸಾ ಬಾನು ಸ್ವಾಗತಿಸಿದರು. ಹಾಗೆಯೇ ಮಾಸ್ಟರ್ ಕೆವಿನ್ ಇವರ ಧನ್ಯವಾದ ಹಾಗೂ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ತೆರೆಗಂಡಿತು.

By suddi9

Leave a Reply

Your email address will not be published. Required fields are marked *