ವಿಟ್ಲ: ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125 ರಲ್ಲಿ 125 ಅಂಕ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಕೌಶಿಕ್ ಕೆ ಎಸ್ ಮತ್ತು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತರಾದ ಸಯ್ಯದ್ ಮಹಮ್ಮದ್ ತಮ್‍ಸಿಮ್, ಚೇತನಾ, ಶಿವಪ್ರಸಾದ್ ಇವರನ್ನು ಪುರಸ್ಕರಿಸಿದರು.

k-1

k-2

ಕನ್ನಡ ಅಧ್ಯಾಪಕಿ ಗೀತಾ ಕನ್ನಡ ಆಶಯ ಭಾಷಣ ಮಾಡಿದರು. ಅಧ್ಯಾಪಕ ಶಂಕರನಾರಾಯಣ ಪ್ರಸಾದ್ ಸ್ವಾಗತಿಸಿದರು. ಶಿಕ್ಷಕ ಎ ಮಹಬಲೇಶ್ವರ ಭಟ್ ವಂದಿಸಿದರು. ಪ್ರಭಾ ಮುಖ್ಯ ಶಿಕ್ಷಕ ಸಿ ಹೆಚ್ ಸುಬ್ರಹ್ಮಣ್ಯ ಭಟ್ ಚಣಿಲ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *