ಬಂಟ್ವಾಳ : ಕಾಂಗ್ರೆಸ್ ಸರಕಾರ ರಾಷ್ಟ್ರ ಮತ್ತು ರಾಜ್ಯದಲ್ಲಿ ಅಧಿಕಾರ ಇರುವ ಸಂದರ್ಭಗಳಲ್ಲಿ ತಂದಂತಹ ಹಲವಾರು ಮಹತ್ತರ ಕ್ರಾಂತಿಕಾರಿ ಬದಲಾವಣೆಗಳನ್ನು ಮತ್ತು ಸಾಧನೆಗಳನ್ನು ಮಾಡಿದೆ ಎಂದು ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಅಲಿಯವರು ಕಾರ್ಯಕರ್ತರಿಗೆ ತಿಳಿಸಿದರು. ಪಾಣೆ ಮಂಗಳೂರು ಬ್ಲಾಕ್ ಕಿಸಾನ್ ಕೇತ್ ಮಜ್ದೂರು ಸಂಘಟನೆಯ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ಉಳುವವನೇ ಹೊಲದೊಡೆಯ , ಮೀಸಲಾತಿ , ಪಂ.ರಾಜ್ ಸಂಸ್ಥೆಗಳ ಬಲವರ್ಧನೆ, ರಾ ಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ , ಹಾಲು ಉತ್ಪಾದಕರ ಸಬ್ಸಿಡಿ, ರಸಗೊಬ್ಬರ ವಿತರಣೆ, ಬಡ್ಡಿತಹಿತ ಕೃಷಿ ಸಾಲ, ಕೃಷಿ ಸಲಕರಣೆ ವಿತರಣೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕಾರ್ಯಕರ್ತರು ಜನರಿಗೆ ನೆನೆಪಿಸಿ ಎಂದರು.

congres-sabhe

ಜಿಲ್ಲಾ ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಮಾತನಾಡಿ ಕಿಸಾನ್ ಸಂಘಟನೆಯನ್ನು ಬಲಪಡಿಸಲು ಕಾಂಗ್ರೆಸ್ ಪ್ರಯತ್ನಿಸಿದೆ. ರೈತರಿಗೆ ಯಾವತ್ತೂ ನ್ಯಾಯ ಒದಗಿಸಿದೆ ಎಂದರು. ಪಾಣೆ ಮಂಗಳೂರು ಬ್ಲಾಕ್ ಕಿಸಾನ್ ಘಟಕದ ರಾಜ್ ಕೋಟ್ಯಾನ್, ಬ್ಲಾಕ್ ಸಮಿತಿ ಉಪಾಧ್ಯಕ್ಷ ಉಮಾನಾಥ ಸಾಲೆತ್ತೂರು, ಮಾತನಾಡಿದರು. ಕಾರ್ಯಕ್ರಮದಲ್ಲಿ ಫೆಲಿಕ್ಸ್ ವೇಗಸ್, ಲೋಕೇಶ್ ಸುವರ್ಣ, ಮನೋಜ್ ಆಳ್ವ, ಅಬ್ದುಲ್ ರೆಹಮಾನ್, ವಿಶ್ವನಾಥ ಪೂಜಾರಿ , ನಾಗೇಶ್ ಶೆಟ್ಟಿ, ಶಿವಾನಂದ ಪೂಜಾರಿ , ಮಹಮ್ಮದ್ ಇಕ್ಬಾಲ್, ಬಶೀರ್ ಬಡಕ ಬೈಲ್, ಅಬ್ದುಲ್ ಅಝೀಝ್, ಬಾಲಕೃಷ್ಣ ಮತ್ತು ಕಿಸಾನ್ ವಿಭಾಗದ ಪ್ರಮುಖರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *