ಉಡುಪಿ: ಜೇಸಿಐ ವಲಯ 15 ರ ವಲಯ ಸಮ್ಮೇಳನ ರಜತ ವೈಭವ ಸಮಾರಂಭದಲ್ಲಿ ಜೇಸಿಐ ಉಡುಪಿ ಸಿಟಿ ಘಟಕ ಅತ್ತುತ್ತಮ ಘಟಕ ಪತ್ರಿಕೆ ಮತ್ತು ಯು.ಎನ್.ಎಸ್.ಡಿ ಪ್ರಶಸ್ತಿ ಪಡೆಯಿತು. ಅ.2ರಂದು ನಡೆದ ಸಮಾರಂಭದಲ್ಲಿ ಜೇಸಿ ವಲಯಾದ್ಯಕ್ಷ ಸಂದೀಪ್ ಕುಮಾರ್ ದಂಪತಿ ಪ್ರಶಸ್ತಿಯನ್ನು ಉಡುಪಿ ಸಿಟಿ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಜೇಸಿಐ ಉಡುಪಿ ಸಿಟಿ ಘಟಕದ ಸ್ಥಾಪಕ ಅದ್ಯಕ್ಷ ರವಿರಾಜ ಹೆಚ್.ಪಿ, ಪ್ರದೀಪ್ ಚಂದ್ರ, ಜಗದೀಶ್ ಶೆಟ್ಟಿ, ರಪೀಕ್ ಖಾನ್, ಕರುಣಾಕರ್ ಮುಗೇರ, ವಿನಯ್ ಆಚಾರ್ಯ ಮುಂತಾದವರಿದ್ದರು.

