ಉಡುಪಿ:– ಜೇಸಿಐ ವಲಯ 15 ರ ವಲಯ ಸಮ್ಮೇಳನ ರಜತ ವೈಭವ-2016 ಜೇಸಿಐ ಉಡುಪಿ ಸಿಟಿ ಇದರ ಅತಿಥ್ಯದಲ್ಲಿ ಅ.22 ಮತ್ತು 23 ರಂದು ಚಿತ್ಪಾಡಿ ಯು.ಎಸ್ ನಾಯಕ್ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೇಸಿಐ ಭಾರತದ ಫೌಂಡೇಶನ್ ಅದ್ಯಕ್ಷ ಕೆ.ವಲ್ಲಭದಾಸ ರವರು,ನಮ್ಮ ದೇಶದಲ್ಲಿ ಇಂದು ಯುವ ಜನಾಂಗಕ್ಕೆ ಮಾಗದರ್ಶನದ ಕೊರತೆ ಬಹಳವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ಜೇಸಿ ವರದಾನವಾಗಿದೆ.ಯುವ ಜನಾಂಗದಿಂದ ದೇಶದ ಅಭಿವೃಧಿ ತ್ವರಿತಗತಿಯಲ್ಲಿ ನಡೆಯಲು ಸಾದ್ಯ,ಮಾಹಿತಿ ಮತ್ತು ಉತ್ತಮವಾದ ಚಾರಿತ್ಯ ಇಂದು ಅತ್ಯಂತ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಜೇಸಿ ವಲಯಾದ್ಯಕ್ಷ ಸಂದೀಪ್ ಕುಮಾರ್ ವಹಿಸಿ ಜೇಸಿ ಸಂಸ್ಥೆಯ ಬಗ್ಗೆ ತಿಳಿಸಿದರು.
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ,ಉತ್ತಮವಾದ ಸಮಾಜ ಉತ್ತಮ ವ್ಯಕ್ತಿಗಳಿಂದ ಸಾದ್ಯ ಜೇಸಿ ಸಂಸ್ಥೆಯು ವ್ಯಕ್ತಿತ್ವ ವಿಕಸನದ ಕಾರ್ಯ ಮಾಡುತ್ತಿರುವುದು ಅತ್ಯಂತ ಸ್ತುತ್ಯರ್ಯ ಎಂದರು.
ಪ್ರಧಾನ ಭಾಷಣ ಮಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ,ರಾಜಕಾರಣ ಇಂದು ಹದಗೆಡುತ್ತಿರುವ ಈ ದಿನಗಳಲ್ಲಿ ನಾಯಕರನ್ನು ಸೃಷ್ಟಿಸುವ ಜೇಸಿ ಸಂಸ್ಥೆಯು ದೇಶದ ನಿರ್ಮಾಣದಲ್ಲಿ ತನ್ನದೇ ಆದ ಕಾರ್ಯ ಮಾಡುತ್ತಿದೆ.ಎಂದರು
ಸಮ್ಮೇಳನದ ಪ್ರಧಾನ ಅಧಿಕಾರಿ ರಾಷ್ಟೀಯ ಖಜಾಂಚಿ ಪಿಯೂಷ್ ಗೋಯಲ್, ಪೌಂಡೇಶನ್ ನಿರ್ದೇಶಕ ವೈ ಸುಕುಮಾರ್, ಕಾನೂನು ಸಲಹೆಗಾರ ಶ್ರೀಧರ ಪಿ.ಎಸ್, ನಿಕಟಪೂರ್ವ ವಲಯಾದ್ಯಕ್ಷ ಕೃಷ್ಣಮೋಹನ್ ಪಿ.ಎಸ್, ರಾಷ್ಟೀಯ ಕಾರ್ಯಕ್ರಮ ನಿರ್ದೇಶಕ ಪ್ರಕಾಶ್ ಡಿ, ಸದಾನಂದ ನಾವಡ,ರಶ್ಮೀ ಸಂದೀಪ್,ಪೂರ್ವ ವಲಯಾದ್ಯಕ್ಷರುಗಳು, ಜೇಸಿ ಉಡುಪಿ ಸಿಟಿ ಘಟಕದ ಸ್ಥಾಪಕ ಅದ್ಯಕ್ಷ ರವಿರಾಜ ಹೆಚ್.ಪಿ ಮುಂತಾದವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಲಯಾಡಳಿತ ಮಂಡಳಿಯ ಸದಸ್ಯರು,ವಲಯ ಉಪಾದ್ಯಕ್ಷರು ಭಾಗವಹಿಸಿದ್ದರು.ಘಟಕದ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು. ಕಾರ್ಯಕ್ರಮದಲ್ಲಿ ನೂತನ ವಲಯಾದ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಜಿ ಯವರಿಗೆ ಪ್ರತಿಜ್ಞಾವಿಧಿ ಭೋಧಿಸಲಾಯಿತು. ವಿವಿಧ ಮನರಂಜನೆ ಕಾರ್ಯಕ್ರಮ,ನಡೆಯಿತು.ವಲಯಾದ್ಯಕ್ಷ ಸಂದೀಪ್ ಕುಮಾರ್ ರವರಿಗೆ ವಲಯಾಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

