ಸುದ್ದಿ9 ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ಇಪ್ಪತ್ತೊಂದನೇ ಮಕ್ಕಳ ಧ್ವನಿ ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಜರಗಲಿರುವುದು.
ಮಕ್ಕಳ ಧ್ವನಿ ಸಮಾರಂಭದಲ್ಲಿ ಅಧ್ಯಕ್ಷತೆ, ಕವಿಗೋಷ್ಠಿ, ಕಥಾಗೋಷ್ಠಿಗಳ ಅಧ್ಯಕ್ಷ ಸ್ಥಾನಗಳನ್ನು ವಹಿಸಲು ಆಸಕ್ತರಾದ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಸಾಧನೆಗಳ ವಿವರಗಳನ್ನು ಆಯಾ ಶಾಲಾ-ಕಾಲೇಜುಗಳ ಮುಖ್ಯಸ್ಥರ ದೃಢೀಕೃತ ಪತ್ರದೊಂದಿಗೆ ಶ್ರೀ ಬಿ. ಶ್ರೀನಿವಾಸ ರಾವ್ ಕಾರ್ಯದರ್ಶಿ ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಕಲ್ಲಾವು ‘ಬಿ’ ಮನೆ, ಉರ್ವ, ಅಶೋಕನಗರ, ಮಂಗಳೂರು 575 006. (ದೂರವಾಣಿ: 0824-2457971) ಇವರಿಗೆ ಜುಲೈ 15ರೊಳಗೆ ಕಳುಹಿಸಿಕೊಡಬೇಕು. ಅಲ್ಲದೆ ದಿನಾಂಕ 26-07-2014ರಂದು ಪೂರ್ವಾಹ್ನ ಗಂಟೆ 10.00ರಿಂದ ಕಟೀಲು ದುರ್ಗಾ ಪರಮೇಶ್ವರೀ ಪ.ಪೂ. ಕಾಲೇಜಿನಲ್ಲಿ ನಡೆಯಲಿರುವ ಸಂದರ್ಶನಕ್ಕೆ ಹಾಜರಾಗಬೇಕೆಂದು ಸಮಿತಿಯ ಪ್ರಕಟಣೆ ತಿಳಿಸಿದೆ.
