ಮೂಡುಬಿದಿರೆ: ಜನಸಂಖ್ಯೆಯ ಮೂರನೇ ಎರಡರಷ್ಟು ಮಂದಿ ಯುವಜನರಿರುವ ಭಾರತದ ಭವಿಷ್ಯ ಅವರ ಕೈಯಲ್ಲಿದೆ. ಅವರೇ ನಮ್ಮ ಭಾರತದ ಭವಿಷ್ಯದ ನಿರ್ಣಾಯಕ ಶಕ್ತಿ. ಯುವಜನರು ಮನೋರಂಜನೆಯಲ್ಲೇ ಕಾಲ ಕಳೆಯದೆ ಸಮಾಜದ ಒಳಿತಿಗಾಗಿ ದೃಢಮನಸ್ಸಿನಿಂದ, ಶಿಸ್ತು, ನಿಷ್ಠೆ, ಸಮರ್ಪಣ ಭಾವಗಳಿಂದ ದುಡಿಯಲು ಪಣತೊಡಬೇಕಾಗಿದೆ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕಾ„ಕಾರಿ ರೆ.ಫಾ. ವಿಲಿಯಂ ಮಿನೇಜಸ್ ಕರೆನೀಡಿದರು.

mbd_oct20_1

ಅಲಂಗಾರ್ ಹೋಲಿ ರೋಸರಿ ಚರ್ಚ್‍ನ ಆವರಣದಲ್ಲಿ ಐದು ದಿನಗಳ ಪರ್ಯಂತ ನಡೆದ, ವೇಣೂರು ಕ್ರಿಸ್ತರಾಜ ಚರ್ಚ್‍ನ ಭಾರತೀಯ ಕಥೋಲಿಕ್ ಯುವ ಸಂಚಲನ ಆಶ್ರಿತ ಯುವ ವಿದ್ಯಾರ್ಥಿ ಸಂಚಲನ (ವೈ.ಸಿ.ಎಸ್.)ಸಹಭಾಗಿತ್ವದೊಂದಿಗೆ ನಡೆದ 7ನೇ ವರ್ಷದ ವಾರ್ಷಿಕ ವಾಸ್ತವ್ಯ ಶಿಬಿರದ ಸಮಾರೋಪ ಭಾಷಣ ಮಾಡಿದ ಅವರು, ಗುರಿ ಮುಟ್ಟಲು ಮೌಲ್ಯಾಧಾರಿತ ಜೀವನ ನಡೆಸಿ ಎಂದು ನುಡಿದರು. ವೇಣೂರು ಚರ್ಚ್‍ನ ಧರ್ಮಗುರು ರೆ.ಫಾ. ಆ್ಯಂಟನಿ ವಿ. ಲೂಯಿಸ್ ಅಧ್ಯಕ್ಷತೆ ವಹಿಸಿದ್ದರು. ವ್ಯಕ್ತಿತ್ವಗಳ ಭಿನ್ನತೆ ಮರೆತು ಹೊಸತನವನ್ನು ರೂಪಿಸಿ, ರೂಢಿಸಿಕೊಳ್ಳಲು ಇಂಥ ವಾಸ್ತವ್ಯ ಶಿಬಿರ ಸಹಕಾರಿ’ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಅಲಂಗಾರು ಚರ್ಚ್‍ನ ರೆ.ಫಾ. ಬಾಸಿಲ್ ವಾಸ್, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ , ಪುರಸಭಾ ಸದಸ್ಯ ಎಂ. ಬಾಹುಬಲಿ ಪ್ರಸಾದ್, ಉದ್ಯಮಿ ಅಬುಲ್ ಅಲಾ ಪುತ್ತಿಗೆ, ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಉಪಪ್ರಾಂಶುಪಾಲ ಕ್ಯಾಸಿನ್ ರೊಡ್ರಿಗಸ್, ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ಧನಂಜಯ ಮೂಡಬಿದಿರೆ, ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ ಅಧ್ಯಕ್ಷ ಜಾಕ್ಸನ್ ಎರಿಕ್ ಡಿಕೋಸ್ತ, ಬೆಳ್ತಂಗಡಿ ಐಸಿವೈಎಂ ವಲಯದ ಮಂಗಳೂರು ಪ್ರಾಂತ್ಯದ ಪ್ರತಿನಿ„ ಅನೀಶ್ ಡಿಸೋಜ ಅಲಂಗಾರು ಭಾಗವಹಿಸಿ ಶುಭ ಹಾರೈಸಿದರು.

ವೇಣೂರು ಐಸಿವೈಎಂ ಯುವ ಸಂಚಲನದ ನಿಕಟಪೂರ್ವ ಅಧ್ಯಕ್ಷ ಜೋಯ್ಸನ್ ಕೊಡ್ದೆರೋ ಸ್ವಾಗತಿಸಿ, ಕಾರ್ಯದರ್ಶಿ ಲಿಶಾ ಡಯಾಸ್ ಶಿಬಿರದ ವರದಿ ವಾಚಿಸಿದರು. ಶಿಬಿರಾಧಿಕಾರಿ ಅರುಣ್ ಡಿಸೋಜ ಉಪಸ್ಥಿತರಿದ್ದರು. ಯುವ ಸಂಚಲನದ ಅಧ್ಯಕ್ಷ ವಿಶಾಲ್ ಮಿನೇಜಸ್ ವಂದಿಸಿದರು.

By Suddi9

Leave a Reply

Your email address will not be published. Required fields are marked *