ಮಂಗಳೂರು: ವಿಶ್ವ ತುಳುವೆರೆ ಆಯನೊದ ಅಂಗವಾಗಿ ಡಿ.12,13ರಂದು ತುಳು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಯಿತು. ಈ ಬಗ್ಗೆ ಬದಿಯಡ್ಕದ ಸಹಕಾರಿ ಕಾಲೇಜಿನ ಸಭಾಂಗಣದಲ್ಲಿ ಸಮಾಲೋಚನ ನಡೆಯಿತು.ಸಭೆ ಅಧ್ಯಕ್ಷತೆಯನ್ನು ಮಂಗಳೂರು ಆಕಾಶವಾಣಿಯ ಡಾ.ವಸಂತ ಕುಮಾರ್ ಪೆರ್ಲವಹಿಸಿ ಮಾತನಾಡುತ್ತಾ ವಿಶ್ವಕ್ಕೆ ತುಳು ಸಾಹಿತ್ಯದ ಮೆರುಗನ್ನು ಪಸರಿಸಲು ತುಳುವೆರೆ ಆಯನೊದಲ್ಲಿ ವೈವಿಧ್ಯಮಯ ಸಾಹಿತ್ಯಗಳನ್ನು ಸಂಕ್ರಮಿಸಿ ಸಾಹಿತ್ಯಯಾಣ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

dsc_0093

ಸಭೆಯನ್ನು ಉದ್ಘಾಟಿಸಿದ ಹಿರಿಯ ಸಾಹಿತಿ,ಪತ್ರಕರ್ತ ಮಲಾರ್ ಜಯರಾಮ ರೈ ಮಾತನಾಡುತ್ತಾ ತುಳುನಾಡಿನ ನೀರು ಸೇವಿಸುವ ಪ್ರತಿಯೊಬ್ಬರೂ ತುಳುವರೆಂಬ ಭಾವನೆಯಿಂದ ಸಮ್ಮೇಳನ ಸಂಘಟಿಸಿರುವುದು ತುಳುನಾಡಿನ ಐಕ್ಯತೆಗೆ ನಾಂದಿಯಾಗಲಿದೆ ಎಂದರು.ಡಾ.ಕಿಶೋರ್ ಕುಮಾರ್ ರೈ ಶೇಣಿ,ಶ್ರೀಕೃಷ್ಣಯ್ಯ ಅನಂತಪುರ, ಎಂ.ಕೆ.ಕುಕ್ಕಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

dsc_0099

ಈ.ವಿ.ಎಸ್.ಉಳ್ಳಾಲ್,ರಾಜಶ್ರೀ ರೈ ಪೆರ್ಲ,ಜಯಶ್ರೀ ಅನಂತಪುರ,ಪ್ರಭಾವತಿ ಕೆದಿಲಾಯ,ಅಕ್ಷತರಾಜ್ ಪೆರ್ಲ,ಜ್ಯೋತ್ಸಾ ಕಡಂದೇಲು,ಗೋಪಾಲಕೃಷ್ಣ ಕುಲಾಲ್,ಪದ್ಮಾವತಿ ಏದಾರು, ಸುಂದರ ಬಾರಡ್ಕ, ಭಾಸ್ಕರ ಕುಂಬಳೆ ಮೊದಲಾದವರು ಸಭೆಯಲ್ಲಿ ಸಲಹೆ ಸೂಚನೆ ನೀಡಿದರು.ತುಳು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ವಿಚಾರಗೋಷ್ಠಿ,ಕವಿಗೋಷ್ಠಿ, ಮಕ್ಕಳ ಗೋಷ್ಠಿ ವಿವಿಧ ಸಾಹಿತ್ಯಿಕ ಸ್ಪರ್ಧೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಬಳಿಕ ತುಳು ಸಾಹಿತ್ಯ ಸಮ್ಮೇಳನ ಸಮಿತಿ ರಚಿಸಲಾಯಿತು. ಸನ್ನಿಧಿ ಟಿ.ರೈ ಪ್ರಾರ್ಥನೆ ಹಾಡಿದರು. ಡಾ.ರಾಜೇಶ್ ಆಳ್ವ ಪ್ರಸ್ತಾವನೆಗೈದರು. ಹರೀಶ್ ಸುಲಾಯ ಒಡ್ಡಂಬೆಟ್ಟು ಸ್ವಾಗತಿಸಿ ನಿರಂಜನ ರೈ ಪೆರಡಾಲ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *