ತೃತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನ – ಎರಡನೇ ದಿನ
ಮುಸಲ್ಮಾನರ ಓಲೈಕೆಗಾಗಿ ಗೋವಾದಲ್ಲಿ ಭಾಜಪ ಸರಕಾರದ ಆಶೀರ್ವಾದದಿಂದ
ಅವ್ಯಾಹತ ಗೋಹತ್ಯೆ ! – ಹನುಮಂತ ಪರಬ, ಗೋವಂಶ ರಕ್ಷಾ ಅಭಿಯಾನ, ಗೋವಾ
ಮುಸಲ್ಮಾನರ ಓಲೈಕೆಗಾಗಿ ಗೋವಾದಲ್ಲಿ ಭಾಜಪ ಸರಕಾರದ ಆಶೀರ್ವಾದದಿಂದ
ಅವ್ಯಾಹತ ಗೋಹತ್ಯೆ ! – ಹನುಮಂತ ಪರಬ, ಗೋವಂಶ ರಕ್ಷಾ ಅಭಿಯಾನ, ಗೋವಾ
ಫೋಂಡಾ (ಗೋವಾ) – ಗೋವಾದಲ್ಲಿ ಭಾಜಪದ ಮುಖ್ಯಮಂತ್ರಿ ಮನೋಹರ ಪರ್ರಿಕರ ಇವರ ರಾಜ್ಯದಲ್ಲಿ ಗೋಹತ್ಯೆಗಳಾಗುತ್ತಿರುವುದು ಅತ್ಯಂತ ಖೇದಜನಕ ಸಂಗತಿಯಾಗಿದೆ. ನಾನೊಬ್ಬ ಭಾಜಪದ ಕಾರ್ಯಕರ್ತನಾಗಿದ್ದೇನೆ. ನಾನು ಉಚ್ಚ ನ್ಯಾಯಾಲಯದಲ್ಲಿ ಗೋಹತ್ಯೆಯ ವಿರುದ್ಧ ಅರ್ಜಿಯನ್ನು ದಾಖಲಿಸಿದಾಗ ಭಾಜಪದಿಂದಲೇ ನನಗೆ ವಿರೋಧವಾಯಿತು. ಬಕ್ರಿ ಈದ್ ನಿಮಿತ್ತದ ಕುರ್ಬಾನಿಗಾಗಿ ಮುಸಲ್ಮಾನರಿಗೆ ಸಹಾಯ ಮಾಡುತ್ತೇವೆ, ಎಂದು ಭಾಜಪ ವಿಧಾನಸಭೆಯಲ್ಲಿ ಹೇಳುತ್ತದೆ. ಹೀಗಿದ್ದರೂ ಗೋರಕ್ಷಣಾ ಅಭಿಯಾನದಿಂದಾಗಿ ಈ ವರ್ಷ ರಾಜ್ಯದಲ್ಲಿ ಶೇ.೬೫ ರಷ್ಟು ಗೋಹತ್ಯೆಗಳನ್ನು ತಡೆಯಲು ನಮಗೆ ಸಾಧ್ಯವಾಯಿತು. ಚಹಾದ ಬಗ್ಗೆ ಚರ್ಚಿಸುವ ನರೇಂದ್ರ ಮೋದಿಯವರು ಈಗ ಗೋವುಗಳ ಬಗ್ಗೆ ಚರ್ಚೆ ಮಾಡಿ ಗೋಹತ್ಯಾ ನಿಷೇಧ ಕಾನೂನನ್ನು ದೇಶಾದ್ಯಂತ ಜ್ಯಾರಿಗೊಳಿಸಬೇಕು, ಎಂದು ಗೋವಾದ ಗೋವಂಶ ರಕ್ಷಾ ಅಭಿಯಾನದ ಶ್ರೀ. ಹನುಮಂತ ಪರಬ್ರವರು ಆಗ್ರಹಿಸಿದರು. ಅವರು ತೃತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನದ ಜೂನ್ ೨೧ ರ (ಎರಡನೇ ದಿನದ) ‘ಗೋಪಾಲನೆ ಮತ್ತು ಗೋ ರಕ್ಷೆ’ ಈ ಸತ್ರದಲ್ಲಿ ಮಾತನಾಡುತ್ತಿದ್ದರು.
ಕ್ರೂರ ಪಶುಗಳ ರಕ್ಷಣೆಯಾಗುತ್ತದೆ; ಆದರೆ ಸಾಧುಪ್ರಾಣಿ ಆಕಳುಗಳ ರಕ್ಷಣೆಯಾಗುತ್ತಿಲ್ಲ ! – ಅಮೃತಸಿಂಹ, ಎನಿಮಲ್ ರೆಸ್ಕ್ಯು ಸ್ಕ್ವಾಡ್
ಕ್ರೂರ ಪಶುಗಳ ರಕ್ಷಣೆಗಾಗಿ ಸರಕಾರಿಮಟ್ಟದಲ್ಲಿ ಮತ್ತು ಪ್ರಾಣಿಮಿತ್ರ ಸಂಘಟನೆಗಳಿಂದ ಪ್ರಯತ್ನಗಳಾಗುತ್ತವೆ. ಆದರೆ ಆಕಳಿನಂತಹ ಸಾಧು ಪಶುಗಳ ಹತ್ಯೆ ಅಗುತ್ತಿರುವಾಗ ಅವುಗಳ ರಕ್ಷಣೆಗಾಗಿ ಏನೂ ಪ್ರಯತ್ನಗಳಾಗುವುದಿಲ್ಲ. ಆದುದರಿಂದ ಈ ವಿಷಯವನ್ನು ಜನರ ಮುಂದಿಡಬೇಕು. ಕೇವಲ ಆಕಳು ಮಾತ್ರವಲ್ಲ, ಎತ್ತುಗಳ ರಕ್ಷಣೆಯೂ ಆಗಬೇಕು. ಎತ್ತುಗಳ ಹತ್ಯೆಯು ಆಕಳುಗಳ ಪ್ರಜನನದ ಮೇಲೆ ಪರಿಣಾಮ ಬೀರಲಿದೆ. ಆಕಳುಗಳ ರಕ್ಷಣೆ ಮಾಡುವವರು ಆ ಬಗ್ಗೆ ಕಾನೂನಿನ ಜ್ಞಾನ ಪಡೆಯಬೇಕು, ಎಂದು ಗೋವಾದ ಎನಿಮಲ್ ರೆಸ್ಕ್ಯು ಸ್ಕ್ವಾಡ್ನ ಶ್ರೀ. ಅಮೃತ ಸಿಂಹ ಇವರು ಪ್ರತಿಪಾದಿಸಿದರು.
ಈ ಬಗ್ಗೆ ತಮಿಳುನಾಡುವಿನ ಮಹರ್ಷಿ ವಾಙ್ಮಭಟ ಗೋಶಾಲೆಯ ಆಚಾರ್ಯ ನಿರಂಜನ ಕುಮಾರ ಶರ್ಮಾ, ಕರ್ನಾಟಕದ ಕಾಮಧೇನು ಟ್ರಸ್ಟ್ನ ಶ್ರೀ. ಶೈಲೇಶ ಹೊಳ್ಳಾ, ವಾರಾಣಸಿಯ ಹಿಂದೂ ಯುವ ವಾಹಿನಿಯ ರಾಜ್ಯ ಉಪಾಧ್ಯಕ್ಷ ಶ್ರೀ. ಮನೀಷ ಪಾಂಡೆಯ, ದೆಹಲಿಯ ಗೋಜ್ಞಾನ ಫೌಂಡೇಶನ್ನ ಶ್ರೀ. ಸುದರ್ಶನ, ಪುಣೆಯ ಹಿಂದೂ ಸ್ವಾಭಿಮಾನ ಪ್ರತಿಷ್ಠಾನದ ಸದಸ್ಯ ನ್ಯಾಯವಾದಿ ದೇವದಾಸ ಶಿಂದೆ ಮತ್ತು ಪಂಜಾಬ್ನ ಪಂಜಾಬ್ ಗೋರಕ್ಷಾ ದಳದ ಸಂಸ್ಥಾಪಕ ಅಧ್ಯಕ್ಷ ಶ್ರೀ. ಸತೀಶಕುಮಾರ ಇವರೂ ಈ ವಿಷಯದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು.
ಚರ್ಚ್ಗಳ ಹಿಡಿತದಲ್ಲಿರುವ ಭಾರತದ ವಾರ್ತಾವಾಹಿನಿಗಳು ! – ಸುರೇಶ ಚವ್ಹಾಣಕೆ, ಸಂಚಾಲಕರು, ಸುದರ್ಶನ ನ್ಯೂಸ್
ವಾರ್ತಾವಾಹಿನಿಗಳು ರಾಜಕಾರಣಿಗಳಂತೆ ಮುಸಲ್ಮಾನರ ಓಲೈಕೆ ಮಾಡ ತೊಡಗಿವೆ. ವಾಹಿನಿಯೊಂದರ ಮೂಲಕ ಶೀಘ್ರದಲ್ಲಿಯೇ ಪಾಕಿಸ್ತಾನಕ್ಕಾಗಿ ವಾಹಿನಿ ಆರಂಭವಾಗುತ್ತಿದೆ. ಆದುದರಿಂದ ಆ ವಾಹಿನಿಯ ಕಾರ್ಯಕ್ರಮದಲ್ಲಿ ಮುಸಲ್ಮಾನರ ಸಹಭಾಗ ಹೆಚ್ಚಾಗುತ್ತಿದೆ. ಭಾರತದ ವಾರ್ತಾವಾಹಿನಿಗಳು ಚರ್ಚ್ ಮತ್ತು ವಿದೇಶಿಯರ ಹಾಗೂ ವಿದೇಶಿ ಶಿಕ್ಷಣ ಪಡೆಯುವವರ ವಶದಲ್ಲಿದೆ. ಆದುದರಿಂದ ಹಿಂದೂಗಳ ಸಮಸ್ಯೆಗಳನ್ನು ವಾಹಿನಿಗಳಲ್ಲಿ ತೋರಿಸಲಾಗುತ್ತಿಲ್ಲ. ದೇಶದಲ್ಲಿನ ೪೫೦ ವಾಹಿನಿಗಳಲ್ಲಿ ಕೆಲವೊಂದು ಬೆರಳೆಣಿಕೆಯಷ್ಟು ಹಿಂದೂದ್ವೇಷಿ ರಾಷ್ಟ್ರೀಯ ವಾಹಿನಿಗಳ ಧೋರಣೆಗಳನ್ನು ಉಳಿದ ವಾಹಿನಿಗಳು ಅನುಸರಿಸುತ್ತಿರುವುದರಿಂದ ಹಿಂದೂಗಳ ವಿಚಾರವನ್ನು ಮಂಡಿಸುವ ಒಂದೇಒಂದು ವಾಹಿನಿ ಈ ದೇಶದಲ್ಲಿಲ್ಲ. ರಾಷ್ಟ್ರೀಯ ವಾಹಿನಿಯೊಂದಕ್ಕೆ ಹಣ ನೀಡಿಯೂ ಅದು ಗೋರಕ್ಷಣೆಯ ಕಾರ್ಯಕ್ರಮದ ಜಾಹೀರಾತನ್ನು ತೋರಿಸಲು ನಿರಾಕರಿಸಿತು; ಏಕೆಂದರೆ ಆ ಮೂಲಕ ಹಿಂದೂಗಳು ಜಾಗೃತರಾಗುವರು. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂಗಳ ಸಮಸ್ಯೆಯನ್ನು ಮಂಡಿಸುವ ಹಿಂದೂ ವಾಹಿನಿಯ ಆವಶ್ಯಕತೆ ಇದೆ, ಎಂದು ‘ಸುದರ್ಶನ ನ್ಯೂಸ್’ ಈ ರಾಷ್ಟ್ರೀಯ ವಾಹಿನಿಯ ಸಂಚಾಲಕರಾದ ಶ್ರೀ. ಚವ್ಹಾಣಕೆಯವರು ‘ಹಿಂದೂ ದೂರದರ್ಶನದಲ್ಲಿ ತಮ್ಮ ಸಹಭಾಗ’ ಈ ವಿಷಯದ ಬಗ್ಗೆ ವಿಚಾರವನ್ನು ಮಂಡಿಸಿದರು.




