ಸುದ್ದಿ 9 ಕೈಕಂಬ :: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಜನರಲ್ ಮರ್ಚಂಟ್ ನಾರಾಯಣ ಪೊಳಲಿ ಅವರು ಸುಮಾರು 50 ವರ್ಷಗಳಿಗು ಹೆಚ್ಚು ಕಾಲ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ದೇವಸ್ಥಾನದ ಸೇವಾಕಾರಾಗಿ (ಚೆಂಡೆ, ಮದ್ದಳೆ,ವಾದಕರಾಗಿ) ಸೇವೆಯನ್ನು ಸಲ್ಲಿಸಿದ್ದು ನೇತ್ರದಾನವನ್ನು ಘೋಷಿಸಿದ್ದ ನಾರಾಯಣ ಪೊಳಲಿ ( 93 ವ.)ಅವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಪೊಳಲಿ ಸ್ವ ಗ್ರಹದಲ್ಲಿ ಮಂಗಳವಾರ ನಿಧನಹೊಂದಿದರು.ದೇರಳೆಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯ ನೇತ್ರ ತಜ್ಞರು ಆಗಮಿಸಿ ನೇತ್ರದಾನದ ಪ್ರಕ್ರೀಯೆಗಳನ್ನು ನಡೆಸಿದರು. ದೇವಳದ ವಠಾರದಲ್ಲಿ ಅವರ ಜಿನಸಿ ಅಂಗಡಿ( ನಾರಾಯಣ ಎಂಡ್ ಸನ್ ) ವ್ಯಾಪರಿಗಳಾಗಿದ್ದರು. ಹಾಗೂ ಅವರು ರಾ,ಸ್ವ,ಸಂಘದ ಹಿರಿಯ ಕಾರ್ಯಕರ್ತರಾಗಿದ್ದರು. ಅವರು ಸಾಮಾಜಿಕ ಪ್ರಮುಖರಾಗಿ ಹಿರಿಯ ದಾನಿಯಾಗಿ ಅನೇಕ ಮಂದಿ ಅಸಕ್ತರಿಗೆ ಹಾಗೂ ಸಂಸ್ಥೆಗಳಿಗೆ ದಾನ ಕೊಡುಗೆಗಳನ್ನು ನೀಡಿರುತ್ತಾರೆ. ಅವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರಿಗೆ ಪತ್ನಿ ಒರ್ವ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

