ಸುದ್ದಿ9ಬಂಟ್ವಾಳ: ಇಲ್ಲಿನ ಪುರಸಭಾ ಆವರಣ ಗೋಡೆಗೆ ತಾಗಿಕೊಂಡೆ ತೆರೆದ ಕೊಳವೆ ಬಾವಿಯೊಂದು ಕಂಡು ಬಂದಿದೆ. ಕೆಲ ದಿನಗಳ ಹಿಮದೆಯಷ್ಟೇ ವಿಜಾಪುರ ಜಿಲ್ಲೆಯಲ್ಲಿ ಬಾಲಕಿಯೋರ್ವಳು ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಇನ್ನೂ ಮಾಸದಿರವ ಹಂತದಲ್ಲಿ ಇಲ್ಲೂ ಕೂಡ ತೆರೆದ ಕೊಳವೆ ಬಾವಿ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಸುಮಾರು 250 ಅಡಿ ಆಳದ ಕೊಳವೆ ಬಾವಿ ಇದು ಎಮದು ಅಂದಾಜಿಸಲಾಗಿದೆ. ಈಗ ಅರ್ಧ ಭಾಗದವರೆಗೆ ಮಳೆ ನೀರು ತುಂಬಿ ಕೊಂಡಿದೆ. ಪುರಸಭೆಯ ಹಿರಿಯ ಸದಸ್ಯರೊರ್ವರ ಪ್ರಕಾರ ಸುಮಾರು 15 ವರ್ಷಗಳ ಹಿಂದೆ ಈ ಕೊಳವೆ ಬಾವಿಯನ್ನು ಕೊರೆಸಲಾಗಿತ್ತು. ಆದರೆ ನೀರು ಸಿಗದ ಕಾರಣ ನಿರುಪಯುಕ್ತ ಕೊಳವೆ ಬಾವಿಗೆ ಮುಚ್ಚಳ ಹಾಕಿ ಅಲ್ಲಿಗೆ ಬಿಡಲಾಯಿತು. ಕಿಡಿಗೇಡಿಗಳ ಉಪಟಳದಿಂದ ಮುಚ್ಚಳ ಮಾಯವಾಗಿದೆ. ಈ ಬಗ್ಗೆ ಪುರಸಭೆ ಗಮನ ಹರಿಸದೇ ಇರುವುದರಿಂದ ಮೃತ್ಯುಕೂಪ ಬಾಯ್ದೆರೆದು
ನಿಲ್ಲುವಂತಾಗಿದೆ.



