ಬಜಪೆ: ಶ್ರೀ ದುರ್ಗಾ ಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಆರನೇ ದಿನ ಲಲಿತಾ ಪಂಚಮಿಯ ಸಂಭ್ರಮ ಸಡಗರದಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು.

ಲಲಿತಾ ಪಂಚಮಿಗೆ ಕಟೀಲು ಕ್ಷೇತ್ರದಲ್ಲಿ ಮುತ್ತೈದೆ ಬಾಗಿನ ಪ್ರತೀಕವಾಗಿ ಮಹಿಳೆಯರಿಗೆ ‘ಸೀರೆ ಪ್ರಸಾದ’ ವಿತರಣೆ ಸಂಜೆ 6.30ರಿಂದ ಮಧ್ಯರಾತ್ರಿಯವರೆಗೂ ಮುಂದುವರೆಯಿತು. ಮಹಿಳೆಯರು ಮಧ್ಯಾಹ್ನ 3ಗಂಟೆಯಿಂದಲೇ ಸೀರೆ ಪ್ರಸಾದಕ್ಕಾಗಿ ಸಾಲಲ್ಲಿ ನಿಲ್ಲರಾಂಭಿಸಿದರು. ಸುಮಾರು 18-20 ಸಾವಿರ ಮಹಿಳೆಯರಿಗೆ ಸೀರೆ ಪ್ರಸಾದ ವಿತರಿಸಲಾಗಿದೆ. ಕ್ಷೇತ್ರದ ಅರ್ಚಕರಾದ ಆಸ್ರಣ್ಣರು ಸೀರೆ ಪ್ರಸಾದ ವಿತರಿಸಿದರು







