ವಿಟ್ಲ: ಶೋಕಮಾತಾ ಇಗರ್ಜಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕೆಥೋಲಿಕ್ ಸಭಾ ವಿಟ್ಲ ಘಟಕ ಮತ್ತು ವಿಶೆಂತ್ ಪಾವ್ಲ್ ಸಭಾ ವಿಟ್ಲ ಇವರ ಜಂಟಿ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಯಿತು. ವಿಟ್ಲ ಶೋಕಮಾತೆಯ ಇಗರ್ಜಿಯ ಧರ್ಮಗುರುಗಳಾದ ಫಾ| ಎರಿಕ್ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿದರು.

cc

ಮುಖ್ಯ ಅತಿಥಿಗಳಾಗಿ ಸಾಲೆತ್ತೂರು ಇಗರ್ಜಿಯ ಧರ್ಮಗುರು ಫಾ| ಹೆನ್ರಿ ಡಿ ಸೋಜಾ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಡಾ| ಜೆಸಿಂತಾ ವೇಗಸ್ ಹಿರಿಯ ನಾಗರಿಕರಿಗೆ ವಯಸ್ಸಾದ ನಂತರ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಮಾಡಬೇಕಾದ ಕೆಲವು ನಿಯಮಗಳ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ಸೈನಿಕ 98 ವರ್ಷದ ಜೋಸೆಫ್ ಕೂಟೇಲು, 99 ವರ್ಷದ ಮೇರಿ ಪಾಯಿಸ್ ಕೆಲಿಂಜ ಮತ್ತು 66 ವರ್ಷ ದಾಂಪತ್ಯ ಜೀವನ ಪೂರೈಸಿದ ಒಕ್ಕೆತ್ತೂರು ಮಂಜಲಾಡಿ ಮೌರಿಸ್ ಮಸ್ಕರೇಂಞಸ್ ಮತ್ತು ಕೋಸೆಸ್ ಮಸ್ಕರೇಂಞಸ್ ದಂಪತಿಗಳನ್ನು ಸನ್ಮಾನಿಸಲಾಯಿತು. ಹಾಗೂ ಇತರ 56 ಮಂದಿ 75 ವರ್ಷ ಮೀರಿದ ಹಿರಿಯ ನಾಗರಿಕರನ್ನು ಗೌರವಿಸಲಾಯಿತು.

ವಿಟ್ಲ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೂವಿಸ್ ಮಸ್ಕರೇನಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಥೋಲಿಕ್ ಸಭಾದ ಅಧ್ಯಕ್ಷ ಮನೋಹರ್ ಲ್ಯಾನ್ಸಿ ಡಿ ಸೋಜಾ ಸ್ವಾಗತಿಸಿದರು. ಎಸ್ ವಿ ಪಿ ಅಧ್ಯಕ್ಷೆ ಜುಲಿಯಾನಾ ಮೇರಿ ಲೋಬೊ ವಂದಿಸಿದರು. ವಲೇರಿಯನ್ ಮಾಡ್ತಾ ಕಾರ್ಯಕ್ರಮ ನಿರ್ವಹಿಸಿದರು. ಲಿಡಿಯಾ ಸಿಕ್ವೇರಾ ಸಹಕರಿಸಿದರು.

By suddi9

Leave a Reply

Your email address will not be published. Required fields are marked *