ಬಂಟ್ವಾಳ: ಬರಿಮಾರು ಶ್ರೀ ಮಹಮ್ಮಾಯಿ ಸೇವಾ ಸಮಿತಿಯ 2016-17ರ ಸಾಲಿನ ವಾರ್ಷಿಕ ಮಹಾಸಭೆಯು ಜರಗಿತು. ಅಧ್ಯಕ್ಷ ಸುಧಾಕರ ಸಪಲ್ಯ ಮತ್ತು ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಪದಾ„ಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಶಂಕರ ಆಚಾರ್ಯ ಹೊನ್ನಪ್ಪರ ಕೋಡಿ, ಗೌರವಾಧ್ಯಕ್ಷರಾಗಿ ಅಮಿತ್ ಕುಮಾರ್ ಜೈನ್,ಉಪಾಧ್ಯಕ್ಷರಾಗಿ ಜಯಂತ ಪಂಜುರ್ಲಿಗುಡ್ಡೆ ಸದಾನಂದ ಶಾಲಾ ಬಳಿ,ಕಾರ್ಯದರ್ಶಿಯಾಗಿ ಜನಾರ್ದನ ಸುವರ್ಣ,ಜತೆ ಕಾರ್ಯದರ್ಶಿಯಾಗಿ ಜಗದೀಶ ಪಾಪೆತ್ತಿಮಾರು,ಕೋಶಾ„ಕಾರಿಯಾಗಿ ಶಿವಾನಂದ ಕರ್ತಕೋಡಿ,ಕ್ರೀಡಾ ಕಾರ್ಯದರ್ಶಿಗಳಾಗಿ ಗಣೇಶ್ ಬುರ್ದು,ಗಂಗಾಧರ ದೇಲಬೆಟ್ಟು ಹಾಗೂ ಉಮೇಶ್ ಕೋಟ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಹರಿಕೃಷ್ಣ ಬಿ. ಎಸ್. ಬರಿಮಾರು ಹಾಗೂ ಸದಾಶಿವ ತಿಮ್ಮಯರೆಕೋಡಿ ಅವರು ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಸುಧಾಕರ ಸಪಲ್ಯ, ಸೀತಾರಾಮ ಆಚಾರ್ಯ, ಸದಾಶಿವ ಜಿ., ಗೋಪಾಲ ನಾಯಕ್,ಸುಬ್ಬಣ್ಣ ಕಾಂಬ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ಕುಮಾರ್ ಪಾಪೆತ್ತಿಮಾರ್, ಚಿದಾನಂದ ಪಿ., ವಿಶ್ವನಾಥ ಪೂಜಾರಿ, ದಿನೇಶ್ ಪೂಜಾರಿ, ಅರುಣ್ ಆಳ್ವ, ಓಂಪ್ರಕಾಶ್ ಆಚಾರ್ಯ, ಹರೀಶ್ ಜೈನ್, ರಾಜೇಶ್ ಭೋವಿ, ಶೇಖರ, ನಾಗೇಶ್ ಭಂಡಾರಿ, ರಾಮಣ್ಣ ಪೂಜಾರಿ, ಸಂತೋಷ್ ಕುಮಾರ್ ಆಯ್ಕೆಯಾದರು.

