ಕೈಕಂಬ: ಗಂಜಿಮಠ ರಾಜ್ ಅಕಾಡೆಮಿ ಶಾಲೆಯ ವಿದ್ಯಾರ್ಥಿನಿಯರು ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ವಿಜೇತರಾಗಿ(17ರ ವಯೋಮಿತಿ ಮತ್ತು 14ರ) ವಯೋಮಿತಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದೇ ತಿಂಗಳ 24ರಿಂದ ರಾಜಸ್ಥಾನ ಮತ್ತು ಛತ್ತೀಸ್ಗಡ್ ನಲ್ಲಿ ಜರಗಲಿರುವ ಸ್ಪರ್ಧೆಗೆ ಭಾಗವಹಿಸುವ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಸಂಚಾಲಕಿ ಮಮತಾ ವೈ ಶೆಟ್ಟಿ, ಪ್ರಾಂಶುಪಾಲ ಡಾ. ಪ್ರೊ. ಜಸ್ವಂತ್ ಸಾಮ್ಯುವೆಲ್, ದೈಹಿಕ ಶಿಕ್ಷಣ ನಿರ್ದೇಶಕ ಶಶಿಧರ ಶೆಟ್ಟಿ ಎಂ. ಮತ್ತು ತರಬೇತುದಾರ ಕಶಲ್ ಸುವರ್ಣ ಗೌರವಿಸಿ, ಶುಭಹಾರೈಸಿದರು.

