ಸುಳ್ಯ: ಹೊಸ ಅಭಿವೃದ್ಧಿಯ ಹೆಸರಿನಲ್ಲಿ ಕಾಡಿನ ನಾಶವಾಗುತ್ತಿರುವುದು ದುರಂತ. ಮಾನವನ ಹಸ್ತಕ್ಷೇಪದಿಂದಾಗಿ ಅರಣ್ಯನಾಶವಾಗುತ್ತಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ. ಪ್ರಾಕೃತಿಕ ವಿಪತ್ತುಗಳು ಮಾನವನ ಅತಿಯಾದ ಹಸ್ತಕ್ಷೇಪದ ದುಷ್ಪಲ ಎಂದು ಸುಳ್ಯ ಗಾಂಧಿನಗರ ಸಕರ್ಾರಿಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಳಿನಿ ಹೇಳಿದ್ದಾರೆ.

20sul6
ಸುಳ್ಯದ ಎಂದು ಸ್ನೇಹ ಶಾಲೆಯ ಇಕೋ ಕ್ಲಬ್ನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಗಿಡಗಳ ವಿತರಣೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ಶ್ಲಾಘನೀಯ. ಪ್ರಕೃತಿ ಸಂಪತ್ತಿನ ಮಡಿಲಿನಲ್ಲಿ ಸೇರಿರುವ ಇಲ್ಲಿನ ವಿದ್ಯಾಥರ್ಿಗಳು ಅದೃಷ್ಟವಂತರು ಅವರು ಹೇಳಿದರು. ಪ್ಲ್ಲಾಸ್ಟಿಕ್ ಇನ್ನು ತ್ಯಾಜ್ಯವಲ್ಲ, ಅದು ಒಂದು ಇಂಧನ ಮೂಲ. ಈ ಮೂಲಕ ಪ್ಲಾಸ್ಟಿಕ್ಗೂ ಬೆಲೆ ಕಟ್ಟುವ ಕಾಲ ಬಂದಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಮಾತನಾಡಿ, ಮಕ್ಕಳು ಪರಿಸರ ಪ್ರೀತಿ ಬೆಳೆಸಿಕೊಳ್ಳಬೇಕು. ಇಕೋಕ್ಲಬ್ನ ಕಾರ್ಯಕ್ರಮದ ಮೂಲಕ ವಿದ್ಯಾಥರ್ಿಗಳು ನಾಯಕತ್ವ ಗುಣ, ಜವಾಬ್ದಾರಿ ಹಂಚಿಕೆ, ಕಾರ್ಯಕ್ರಮ ಸಂಯೋಜನೆ ಮುಂತಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸ್ನೇಹ ಇಕೋ ಕ್ಲಬ್ ಅಧ್ಯಕ್ಷ ಕೇಶವಪ್ರಸನ್ನ(10ನೇ ತರಗತಿ), ಶಿಕ್ಷಕ ವೃಂದದವರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ಇಕೋ ಕ್ಲಬ್ ನಿದರ್ೆಶಕ ರಘುರಾಮ ಭಟ್ ದೊಡ್ಡತೋಟ ಸ್ವಾಗತಿಸಿದರು. ಶಿಕ್ಷಕ ಪ್ರಸನ್ನ ಐವನರ್ಾಡು ವಂದಿಸಿದರು. ವಿದ್ಯಾಥರ್ಿನಿ ಮಾನಸ ಪೇರಾಲು(10ನೇ ತರಗತಿ) ನಿರೂಪಿಸಿದರು

By suddi9

Leave a Reply

Your email address will not be published. Required fields are marked *