ಮಲ್ಪೆ: ಮಲ್ಪೆ ಕೊಡವೂರು ರೋಟರಿ ಕ್ಲಬ್ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡುವ ರೋಟರಿ ಪುರಸ್ಕಾರ್ ಪ್ರಧಾನ ಸಮಾರಂಭ ಸೆ.30 ರಂದು ಶುಕ್ರವಾರ ಕೊಡವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ ಸಮಾಜ ಸೇವಕ ಕಳೆದ 28 ವರ್ಷಗಳಿಂದ ಕಾಪು ಪರಿಸರದಲ್ಲಿ ಅನಾಥ ಹೆಣಗಳ ಶವ ಸಂಸ್ಕಾರ ಮತ್ತು ಸಹಾಯ ಮಾಡುತ್ತಿರುವ ಸೂರಿ ಶೆಟ್ಟಿ ಕಾಪು, ರಕ್ತದಾನ ವಿಭಾಗದಲ್ಲಿ ಸಾಧನೆ ಮಾಡಿದ ಜಗದೀಶ್,ನಮ್ಮ ಭೂಮಿ ಯ ರಾಮಂಜಿ ಯವರಿಗೆ ರೋಟರಿ ಪುರಸ್ಕಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲಾ ಮಾಜಿ ಕಾರ್ಯದರ್ಶಿ ಪ್ರೋ.ಬಾಲಕೃಷ್ಣ ಮದ್ದೋಡಿ,ವಲಯ ಸೇನಾನಿ ರಾಮ ಪೂಜಾರಿ, ಕಾರ್ಯದರ್ಶಿ ಸಂದರ ಪೂಜಾರಿ ಮುಂತಾದವರಿದ್ದರು,ಅದ್ಯಕ್ಷ ಪ್ರಭಾತ್ ಕೋಟ್ಯಾನ್ ಅದ್ಯಕ್ಷತೆ ವಹಿಸಿದ್ದರು.ರೋಟರಿ ಸದಸ್ಯ ಜೀಸಿ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಸಮಾಜ ಸೇವೆಯ ಬಗ್ಗೆ ಉಪನ್ಯಾಸ ನೀಡಿದರು.ಪೂರ್ಣಿಮಾ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು.ಜನಾರ್ಧನ್ ಕೊಡವೂರು ಸ್ವಾಗತಿಸಿದರು.ಮಾಜಿ ರಾಜ್ಯಪಾಲ ರೋಟರಿಯ ಮಹೇಶ್ ಕುಮಾರ್ ವಂದಿಸಿದರು.ರೋಟರಿ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

