ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಬಿ ಒಕ್ಕೂಟದ ನಂದಿನಿ ಸ್ವ-ಸಹಾಯ ಸಂಘದ 3 ನೇ ವರ್ಷದ ವಾರ್ಷಿಕೋತ್ಸವವು ಸೇರಾಜೆ ಅಣ್ಣು ಪೂಜಾರಿಯವರ ಮನೆಯಲ್ಲಿ ಒಕ್ಕೂಟದ ಅಧ್ಯಕ್ಷ ಸುಂದರ ಆಚಾರ್ಯ ನೆಗಳಗುಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಗಿ ವಲಯ ಮೇಲ್ವಿಚಾರಕ ಜನಾರ್ಧನ ಮತ್ತು ಸೇವಾಪ್ರತಿನಿಧಿ ಸರಿತಾ ಭಾಗವಹಿಸಿದ್ದರು. ಒಕ್ಕೂಟದ ಪದಾಧಿಕಾರಿಗಳಾದ ನಾರಾಯಣ ಮತ್ತು ಪ್ರೇಮಾ ಆರ್ ಹೆಗಡೆ ಉಪಸ್ಥಿತರಿದ್ದರು. ಉಮಾವತಿ ಸ್ವಾಗತಿಸಿದರು. ಶೋಭಾ ವರದಿ ಮಂಡಿಸಿದರು. ವನಿತಾ ವಂದಿಸಿದರು. ಲವೀನಾ ಲೋಬೋ ಕಾರ್ಯಕ್ರಮ ನಿರೂಪಿಸಿದರು. ತಂಡದ ಎಲ್ಲಾ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು.
