ವಿಟ್ಲ: ದೇವಾಡಿಗರ ಸಮಾಜ ಸೇವಾ ಸಂಘ ವಿಟ್ಲ ವಲಯ ಇದರ 25ನೇ ವಾರ್ಷಿಕ ಮಹಾಸಭೆ ಮತ್ತು ವರ್ಷದ ಶ್ರೀ ಸತ್ಯನಾರಾಯಣ ಪೂಜೆಯು ಮಂಗಳಪದವು ದೇವಾಡಿಗರ ಸಮುದಾಯ ಭವನದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜನಾರ್ಧನ ಎಂ ವಹಿಸಿದ್ದರು.

1

ಮುಖ್ಯ ಅತಿಥಿಗಳಾಗಿ ವೀರಕಂಬ ಗ್ರಾಮ ಪಂಚಾಯತ್ ಸದಸ್ಯ ರಘು ಪೂಜಾರಿ, ಮಂಗಳೂರು ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಕಾರ್ಯದರ್ಶಿ ದೇವದಾಸ ಕದ್ರಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ರಮಾನಾಥ ದೇವಾಡಿಗ ಮತ್ತು ಎನ ವೆಂಕಪ್ಪ ದೇವಾಡಿಗ ನಗ್ರಿ ವೇದಿಕಯಲ್ಲಿದ್ದರು. ಚಂದ್ರಹಾಸ ದೇವಾಡಿಗ ಕೊಡಂಗೆ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ಮಂಕುಡೆ ವರದಿ ವಾಚಿಸಿದರು. ಮಹೇಶ್ ವಂದಿಸಿದರು. ಯತೀಶ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಿಶ್ವನಾಥ ದೇವಾಡಿಗ ಸಹಕರಿಸಿದರು. ಈ ಸಂದರ್ಭದಲ್ಲಿ ಯುವ ದೇವಾಡಿಗ ಸಂಘವನ್ನು ಸ್ಥಾಪಿಸಲು ನಿರ್ಧರಿಸಲಾಯಿತು.

By suddi9

Leave a Reply

Your email address will not be published. Required fields are marked *